ಚಾಮರಾಜನಗರ: ಮುಜರಾಯಿ ಸಚಿವರು ಜೂನ್ 1ರಿಂದ ದೇವಾಲಯ ಆರಂಭಿಸಲು ಸೂಚನೆ ನೀಡಿದ್ದಾರೆ. ಆದರೆ ಚಾಮರಾಜನಗರದ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದೇವಾಲಯ ದರ್ಶನಕ್ಕೆ ಶಾಸಕ ನರೇಂದ್ರ ಮಲೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹದೇಶ್ವರ ದೇವಾಲಯ ತೆರೆದರೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರಲಿದೆ. ಭಕ್ತಾಧಿಗಳನ್ನು ಆಡಳಿತ ಮಂಡಳಿ ಹೇಗೆ ನಿಯಂತ್ರಿಸಲು ಸಾಧ್ಯವಾಗುತ್ತೆ? ಅಲ್ಲದೆ ದರ್ಶನಕ್ಕೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲೂ ಸಾಧ್ಯವಾಗುವುದಿಲ್ಲ. ದಾಸೋಹ ವ್ಯವಸ್ಥೆ ಮಾಡದಿದ್ದರೆ ಕಾಲದಿಂದಲೂ ನಡೆದು ಬಂದಿರುವ ಪರಂಪರೆ ವ್ಯವಸ್ಥೆಗೆ ಧಕ್ಕೆಯಾಗುತ್ತೆ ಎಂದರು.
Advertisement
Advertisement
ಒಂದು ವೇಳೆ ದರ್ಶನ, ದಾಸೋಹ ಎರಡಕ್ಕೂ ಅವಕಾಶ ನೀಡಿದರೆ ಕೊರೊನಾ ವೈರಸ್ ಹರಡುವ ಭೀತಿ ಇದೆ. ದೇವಾಲಯದ ಬಾಗಿಲು ತೆರೆದು, ಮಸೀದಿ, ಚರ್ಚ್ಗೆ ಅವಕಾಶ ಕೊಡದಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಎಲ್ಲರಿಗೂ ಅವಕಾಶ ಮಾಡಿಕೊಡಿ. ಇನ್ನೊಂದಿಷ್ಟು ದಿನ ದೇವಾಲಯಗಳ ಬಾಗಿಲು ತೆರೆಯದಿದ್ದರೆ, ಇನ್ನೂ ಒಳ್ಳೆಯದು. ಪೂಜೆಗೆ ಆನ್ಲೈನ್ ವ್ಯವಸ್ಥೆ ಮುಂದುವರಿಸಿ ಎಂದು ಶಾಸಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.