– ಉತ್ತರಪ್ರದೇಶದಲ್ಲಿ ಮತ್ತೊಂದು ಭಯಾನಕ ಕೃತ್ಯ
ಲಕ್ನೋ: ಮನೆಯಲ್ಲಿ ಮಲಗಿದ್ದ ಮೂವರು ಅಪ್ರಾಪ್ತ ಸೋದರಿಯರ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಉತ್ತರ ಪ್ರದೇಶದ ಗೋಂಡಾದ ಪರಸಪುರದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಘಟನೆ ನಡೆದಿದ್ದು ಮೂವರನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇಬ್ಬರಿಗೆ ಸಣ್ಣ ಗಾಯಗಳಾಗಿದ್ದು, ಮತ್ತೋರ್ವ ಬಾಲಕಿಯ ಮುಖದ ಮೇಲೆ ಆ್ಯಸಿಡ್ ಬಿದ್ದಿದೆ. ಆದ್ರೆ ಆ್ಯಸಿಡ್ ಎರಚಿದ್ದು ಯಾರು ಮತ್ತು ಏಕೆ ಎಂಬುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಎಸ್ಪಿಗೆ ಪತ್ರ ಬರೆದ ಹತ್ರಾಸ್ ಪ್ರಕರಣದ ಪ್ರಮುಖ ಆರೋಪಿ ಸಂದೀಪ್
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಗೋಂಡಾದ ಎಸ್ಪಿ ಶೈಲೇಶ್ ಕುಮಾರ್ ಪಾಂಡೆ, ಮೂವರು ಸೋದರಿಯ ಮೇಲೆ ಕೆಮಿಕಲ್ ದಾಳಿ ನಡೆದಿದೆ. ಅಪ್ರಾಪ್ತೆಯರ ಮೇಲೆ ಮೇಲೆ ಹಾಕಲಾದ ಕೆಮಿಕಲ್ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡ ಭೇಟಿ ನೀಡಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕೇಸ್ – ಸಂಚಲನ ಸೃಷ್ಟಿಸಿದ್ದ ವೆಬ್ಸೈಟ್ ದಿಢೀರ್ ಬಂದ್
Advertisement
Advertisement
ಕೆಮಿಕಲ್ ದಾಳಿಗೊಳಗಾದ ಮೂವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಓರ್ವ ಬಾಲಕಿಯ ದೇಹದ ಶೇ.5 ರಿಂದ 7 ರಷ್ಟು ಸುಟ್ಟಿದೆ. ಈ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿಯರಿಗೆ ಪರಿಚಯಸ್ಥನೇ ದಾಳಿ ನಡೆಸಿರುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಶೈಲೇಶ್ ಕುಮಾರ್ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ
ನಮಗೆ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲ. ದಾಳಿ ಹೇಗೆ ಮತ್ತು ಯಾರಿಂದ ನಡೆಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ನಮಗೆ ಯಾರ ಜೊತೆ ವೈರತ್ವ ಇಲ್ಲ. ಘಟನೆ ನಡೆದರೂ ಇಷ್ಟು ಸಮಯವಾದ್ರೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿಲ್ಲ ಎಂದು ಬಾಲಕಿಯ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೇಪ್ ಆ್ಯಂಡ್ ಮರ್ಡರ್-ಬಾಲಕಿಯ ಕಣ್ಣು ಕಿತ್ತಿ, ನಾಲಿಗೆ ಕತ್ತರಿಸಿ, ಕತ್ತು ಹಿಸುಕಿ ಬರ್ಬರ ಕೊಲೆ
ಸಿಎಂ ಯೋಗಿ ವಿರುದ್ಧ ಆಪ್ ಕಿಡಿ: ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಜೀವಿಸುವ ಹಕ್ಕು ಇಲ್ಲವೇ? ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಆ್ಯಸಿಡ್ ದಾಳಿ ಅಂತಹ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬರುತ್ತಿವೆ. ಸಿಎಂ ಯೋಗಿ ಸರ್ಕಾರ ಹೆಣ್ಣು ಮಕ್ಕಳ ರಕ್ಷಿಸುವ ಬದಲಾಗಿ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಕಿಡಿಕಾರಿದ್ದಾರೆ. ಇದನ್ನೂ ಓದಿ: 18 ವರ್ಷದ ಯುವತಿಯ ಕತ್ತು ಕೊಯ್ದು ಕೊಲೆ- ಅತ್ಯಾಚಾರದ ಶಂಕೆ