ಕೋಲ್ಕತ್ತಾ: ವ್ಯಕ್ತಿಯೋರ್ವ ಕಳೆದುಕೊಂಡಿದ್ದ ಬ್ಯಾಗ್ವೊಂದನ್ನು ಟ್ಯಾಕ್ಸಿ ಚಾಲಕ ಹುಡುಕಿಕೊಂಡು ಹೋಗಿ ಹಿಂದಿರುಗಿಸಿದ್ದಾರೆ. ಸದ್ಯ ಟ್ಯಾಕ್ಸಿ ಚಾಲಕನ ಪ್ರಾಮಾಣಿಕತೆ ಕುರಿತಂತೆ ಟ್ವಿಟ್ಟರ್ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನ ಗೆಲ್ಲುತ್ತಿದೆ.
Advertisement
ಇತ್ತೀಚೆಗಷ್ಟೇ ಪತ್ರಕರ್ತ ಅಭಿಜಿತ್ ಎಂಬವರು ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದ ವೇಳೆ ಮ್ಯಾಕ್ಬುಕ್, ಕೀ ಹಾಗೂ ಹಣವಿದ್ದ ಬ್ಯಾಗ್ನನ್ನು ಕಾರಿನಲ್ಲಿಯೇ ಮರೆತಿದ್ದರು. ಬಳಿಕ ಅಭಿಜಿತ್ ಉಬರ್ ಡ್ರೈವರ್ ಗೆ ಕರೆ ಮಾಡಿ ಬ್ಯಾಗ್ ಮರೆತಿದ್ದು, ಅದನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ತಕ್ಷಣ ಹಿಂದೆ-ಮುಂದೆ ಯೋಚಿಸದೇ ಕ್ಯಾಬ್ ಡ್ರೈವರ್ ಮತ್ತೆ ಹಿಂದಿರುಗಿ ಬಂದು ಬ್ಯಾಗ್ನನ್ನು ವಾಪಸ್ ನೀಡಿದ್ದಾರೆ.
Advertisement
Advertisement
ಈ ವಿಚಾರವನ್ನು ಅಭಿಜಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಮನೆಗೆ ಬಂದ ಬಳಿಕ ನಾನು ಕ್ಯಾಬ್ನಲ್ಲಿಯೇ ಬ್ಯಾಗ್ ಮರೆತಿದ್ದೇನೆ ಎಂಬ ವಿಚಾರ ನೆನಪಾಯಿತು. ಬ್ಯಾಗ್ ಒಳಗೆ ಮ್ಯಾಕ್ಬುಕ್, ಕೀ ಹಾಗೂ ಹಣವಿತ್ತು. ಹಾಗಾಗಿ ಕ್ಯಾಬ್ ಚಾಲಕ ಸರವನ್ ಕುಮಾರ್ ಗೆ ಮರು ಕರೆ ಮಾಡಿದೆ. ಅದನ್ನು ಹಿಂದಿರುಗಿಸಲು ಸಮಯವನ್ನು ಲೆಕ್ಕಿಸದೇ ಚಾಲಕ ಮಧ್ಯರಾತ್ರಿ ಬಂದು ವಾಪಸ್ ನೀಡಿದರು ಎಂದು ಕ್ಯಾಪ್ಷನ್ ಹಾಕುವ ಮೂಲಕ ಚಾಲಕನ ಫೋಟೋವನ್ನು ಶೇರ್ ಮಾಡಿದ್ದಾರೆ.
Advertisement
Only dark @Uber stories get reported, so posting this.
I realised I had left my bag in the cab after reaching home from Kolkata airport. It had my MacBook, some cash, keys, books.
Called up this young driver, Sarwan Kumar. He came all the way, past midnight, to return it intact. pic.twitter.com/8rBO83gYCT
— Abhijit Majumder (@abhijitmajumder) March 20, 2021
ಇದೀಗ ಉಬರ್ ಚಾಲಕ ಸರವನ್ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.