ನವದೆಹಲಿ: ಕೋವಿಡ್ 19 ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಾಗಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ವದೇಶಿ ವೆಂಟಿಲೇಟರ್ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕೊರೊನಾ ಸೋಂಕು ದೇಶದಲ್ಲಿ ಹಬ್ಬುತ್ತಿದ್ದ ಕಾರಣ ಮಾರ್ಚ್ 24 ರಂದು ಸ್ವದೇಶಿ ವೆಂಟಿಲೇಟರ್ ರಫ್ತಿಗೆ ನಿಷೇಧ ಹೇರಲಾಗಿತ್ತು. ಈಗ ಸಾವಿನ ಪ್ರಮಾಣ ಶೇ.2.13ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೋವಿಡ್–19 ಉಸ್ತುವಾರಿ ಹೊಂದಿರುವ ಉನ್ನತ ಸಚಿವರ ತಂಡವು (ಜಿಒಎಂ) ವೆಂಟಿಲೇಟರ್ಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.
Advertisement
????Total #COVID19 Cases in India (as on August 2, 2020)
▶️33.43% Active cases (567,730)
▶️65.44% Cured/Discharged/Migrated (1,145,629)
▶️2.13% Deaths (37,364)
Total COVID-19 confirmed cases = Active cases+Cured/Discharged/Migrated+Deaths
Via @MoHFW_INDIA pic.twitter.com/OZf9nlkevD
— #IndiaFightsCorona (@COVIDNewsByMIB) August 2, 2020
Advertisement
ಕೋವಿಡ್–19 ರೋಗಿಗಳ ಪೈಕಿ ಶೇ. 0.28 ಮಂದಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಅವರು ಶುಕ್ರವಾರ ಜಿಒಎಂಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್ ಸಿಇಓ
Advertisement
#CoronaVirusUpdates: #COVID19 India Tracker
(As on 2 August, 2020, 08:00 AM)
▶️ Confirmed cases: 1,750,723
▶️ Active cases: 567,730
▶️ Cured/Discharged/Migrated: 1,145,629
▶️ Deaths: 37,364#IndiaFightsCorona#StayHome #StaySafe @ICMRDELHI
Via @MoHFW_INDIA pic.twitter.com/ouHCvTCFKL
— #IndiaFightsCorona (@COVIDNewsByMIB) August 2, 2020
Advertisement
ಕೆಲ ತಿಂಗಳ ಹಿಂದೆ ದೇಶದಲ್ಲಿ ಕೆಲ ಕಂಪನಿಗಳು ಮಾತ್ರ ವೆಂಟಿಲೇಟರ್ ನಿರ್ಮಾಣ ಮಾಡುತ್ತಿದ್ದವು. ಆದರೆ ಈಗ ಡಜನ್ಗಿಂತಲೂ ಹೆಚ್ಚಿನ ಸಂಖ್ಯೆಯ ಕಂಪನಿಗಳು ವೆಂಟಿಲೇಟರ್ ಅಭಿವೃದ್ಧಿ ಪಡಿಸುತ್ತಿವೆ. ಆರಂಭದಲ್ಲಿ ಬಹಳಷ್ಟು ವೆಂಟಿಲೇಟರ್ ಅಗತ್ಯವಿದೆ ಎಂದು ತಿಳಿಯಲಾಗಿತ್ತು. ಆದರೆ ಈಗ ಸಾವಿನ ಪ್ರಮಾಣ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಜೊತೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
#CoronaVirusUpdates#IndiaFightsCorona
Total #COVID19 recoveries nearly 11.5 lakh.
Recovery Rate reaches a new high of 65.44%.
Case Fatality Rate continues its downward slide to 2.13%.
— Ministry of Health (@MoHFW_INDIA) August 2, 2020
ಈ ಮೊದಲು ದೇಶದಲ್ಲಿ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದ್ದ ಕಂಪನಿಗಳು ಪ್ರತಿ ತಿಂಗಳು 50-100 ನಿರ್ಮಾಣ ಮಾಡುತ್ತಿತ್ತು. ಆದರೆ ಈಗ 5 ಸಾವಿರ – 10 ಸಾವಿರ ವೆಂಟಿಲೇಟರ್ ನಿರ್ಮಿಸುವ ಸಾಮರ್ಥ್ಯ ಪಡೆದಿದೆ.
◾ 17,50,723 total confirmed cases
◾ 11,45,629 cases cured/recovered
◾ 1,98,21,831 samples tested
Here's the State-wise distribution of #COVID19 cases in the country (as on 2nd August 2020)#IndiaFightsCorona pic.twitter.com/AwxwdGjNjz
— PIB India (@PIB_India) August 2, 2020
ಈಗ ಎಷ್ಟಿದೆ?
ಸರ್ಕಾರದ ವರದಿ ಪ್ರಕಾರ ಜೂನ್ 18ಕ್ಕೆ ಶೇ.3.33 ರಷ್ಟಿದ್ದರೆ ಜುಲೈ 10ಕ್ಕೆ ಶೇ.2.72ಕ್ಕೆ ಇಳಿಕೆಯಾಗಿತ್ತು. ಆಗಸ್ಟ್ 1 ರಂದು ಶೇ.2.15ರಷ್ಟಿದ್ದರೆ ಆಗಸ್ಟ್ 2 ರಂದು ಶೇ.2.13ಕ್ಕೆ ಇಳಿಕೆಯಾಗಿದೆ.
ಕರೊನಾ ಸೋಂಕಿತರ ಪೈಕಿ ದೇಶದಲ್ಲಿ ಒಟ್ಟು 11,45,629(ಶೇ.65.44) ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 5,67,730(ಶೇ.33.43) ಸಕ್ರಿಯ ಪ್ರಕರಣಗಳಿದ್ದು, 37,364(ಶೇ.2.13) ಮಂದಿ ಮೃತಪಟ್ಟಿದ್ದಾರೆ.