– ಚಿಲ್ಡ್ ಬಿಯರ್ ನೀಡಿ ಎಣ್ಣೆ ಪ್ರಿಯರ ದಾಹ ತಣಿಸಿದ
– ಮದ್ಯ ಪ್ರಿಯರ ಸಂತಸಕ್ಕೆ ಪಾರವೇ ಇಲ್ಲ
ಲಂಡನ್: ಬ್ರಿಟನ್ನಲ್ಲಿ ಪಬ್ಗಳು ಬಂದ್ ಆಗಿವೆ. ಆದರೆ ಪೂರ್ವ ಲಂಡನ್ನ ವ್ಯಕ್ತಿಯೊಬ್ಬ ಬಿಯರ್ ಮಾರಲು ಉಪಾಯ ಹುಡುಕಿದ್ದು, ಕೆಗ್ಸ್ ಗಳನ್ನು ವ್ಯಾನ್ನಲ್ಲಿ ಪ್ಯಾಕ್ ಮಾಡಿಕೊಂಡು ಮನೆ ಮನೆಗೆ ಹಂಚುತ್ತಿದ್ದಾನೆ.
Advertisement
ವ್ಯಾನ್ ಮೇಲೆ ‘ಟ್ಯಾಕ್ಟಿಕಲ್ ಬಿಯರ್ ರಿಸ್ಪಾನ್ಸ್ ಯುನಿಟ್’ ಎಂದು ಬರೆದುಕೊಂಡು ಫಾರೆಸ್ಟ್ ರೋಡ್ ಬ್ರೇವಿಂಗ್ ಕಂಪನಿಯ ನಿರ್ದೇಶಕ ಪೀಟರ್ ಬ್ರಾವ್ನ್ ಸ್ವತಃ ಬಿಯರ್ ಡೆಲಿವರಿ ಮಾಡಿ ಗ್ರಾಹಕರ ಎಣ್ಣೆ ದಾಹ ತಣಿಸುತ್ತಿದ್ದಾರೆ. ಬಾಕ್ಸ್, ಕ್ಯಾನ್ ಹಾಗೂ ಬಾಟಲಿಗಳ ಬದಲಿಗೆ ಬ್ರಾವ್ನ್ ಅವರು ವ್ಯಾನ್ನ ಟ್ಯಾಂಕ್ನಲ್ಲಿ ಬಿಯರ್ ತುಂಬಿಕೊಂಡು ನಲ್ಲಿ ಮೂಲಕ ಪಿಂಟ್ ಗ್ಲಾಸ್ಗಳಿಗೆ ತುಂಬಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುತ್ತಿದ್ದಾರೆ.
Advertisement
ಶುಕ್ರವಾರ ಹಾಗೂ ಶನಿವಾರ ಮಾರಾಟ ಮಾಡುವಷ್ಟು ಬಿಯರ್ಗೆ ಇದು ಹೊಂದುವುದಿಲ್ಲ. ಆದರೆ ಆರು ವಾರಗಳ ನಂತರ ಮೊದಲ ಬಾರಿಗೆ ಗಾಜಿನ ಗ್ಲಾಸ್ನಲ್ಲಿ ತಣ್ಣನೆ ಬಿಯರ್ ನೋಡಿದಾಗ ಗ್ರಾಹಕರ ಮೊಗದಲ್ಲಿ ಅಘಾದ ಸಂತೋಷ ಕಾಣುತ್ತಿದೆ. ಹೀಗಾಗಿ ಗ್ರಾಹಕರಿಗೆ ಕೋಲ್ಡ್ ಬಿಯರ್ ನೀಡುವ ಮೂಲಕ ಸಂತೋಷ ಪಡಿಸುತ್ತಿದ್ದೇನೆ. ಅವರ ಮೊಗದಲ್ಲಿ ಹಿಂದೆಂದೂ ಕಾಣದ ಸಂತಸ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
Advertisement
Advertisement
ಕೊರೊನಾ ಮಹಾಮಾರಿಯಿಂದಾಗಿ ಬ್ರಿಟನ್ನಲ್ಲಿ ಕಳೆದ ಎರಡು ತಿಂಗಳಿಂದ ಪಬ್ ಹಾಗೂ ಬಾರ್ಗಳು ಬಂದ್ ಆಗಿವೆ. ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದ್ದು, ಈ ಹಿನ್ನೆಲೆ ಪಬ್, ಬಾರ್ ಗಳು ಮುಚ್ಚಿವೆ. ಹೀಗಾಗಿ ಎಣ್ಣೆ ಪ್ರಿಯರು ಪರದಾಡುವಂತಾಗಿದೆ. ಆಹಾರ ಹಾಗೂ ಎಣ್ಣೆ ಮಾರಾಟಗಾರರು ಹೋಮ್ ಡೆಲಿವರಿ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಎಣ್ಣೆ ಪ್ರಿಯರನ್ನು ತಣಿಸುತ್ತಿದ್ದಾರೆ. ಆದರೆ ಪೀಟರ್ ಬ್ರಾವ್ನ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿಲ್ಡ್ ಬಿಯರ್ ಡೆಲಿವರಿ ಮಾಡುತ್ತಿದ್ದಾರೆ. ಇದನ್ನು ಕಂಡ ಮದ್ಯ ಪ್ರಿಯರು ಮುಖ ಅರಳಿಸಿಕೊಂಡು ಕುಡಿದು ಸಂತಸ ಪಡುತ್ತಿದ್ದಾರೆ.