– 10 ವರ್ಷದಿಂದ ನನಗೂ ನವೀನ್ಗೂ ಸಂಬಂಧವಿಲ್ಲ
– ಗ್ಯಾಸ್ ಆನ್ ಮಾಡುವಷ್ಟರಲ್ಲಿ ಪೊಲೀಸರು ಬಂದರು
ಬೆಂಗಳೂರು: ನಾನು ಬದುಕಿರೋದೆ ಹೆಚ್ಚು. ಶಾಸಕನಾಗಿ ನನ್ನ ಮನೆಗೆ ಬೆಂಕಿ ಹೆಚ್ಚಿದರೆ ಹೇಗೆ ಎಂದು ಪ್ರಶ್ನಿಸಿ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರಿಟ್ಟಿದ್ದಾರೆ.
ಘಟನೆಯ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಬಂದು ಏಕಾಏಕಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಅವರು ಲಾಂಗ್, ಮಚ್ಚು, ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಬೇಕು ಅಂತ ಈ ಕೆಲಸ ಮಾಡಿದ್ದಾರೆ. ಯಾರೇ ಆದರೂ ಕ್ರಮ ತೆಗೆದುಕೊಳ್ಳಿ. 50 ವರ್ಷಗಳಿಂದ ನಾವು ಇಲ್ಲೇ ಇದ್ದೇವೆ. ಹಿಂದೂ, ಮುಸ್ಲಿಮರು ನಾವೆಲ್ಲ ಚೆನ್ನಾಗಿದ್ದೇವೆ. ಆದರೆ ಈಗ ನನ್ನ ಮನೆ, ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಶಾಸಕನಾಗಿ ನಮ್ಮ ಸ್ಥಿತಿ ಹೀಗೆ ಆದರೆ ಹೇಗೆ. ನನಗೆ ಜೀವ ರಕ್ಷಣೆ ಕೊಡಿ ಎಂದು ಸಿಎಂ ಯಡಿಯೂರಪ್ಪ, ಆರ್.ಅಶೋಕ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
Advertisement
Advertisement
ನವೀನ್ ನಮ್ಮ ಅಕ್ಕನ ಮಗ, 10 ವರ್ಷದಿಂದ ನಾವು ಅವರಿಂದ ದೂರ ಇದ್ದೇವೆ. ಹೀಗಾಗಿ ನಮಗೂ ಅವನಿಗೂ ಸಂಬಂಧ ಇಲ್ಲ ಎಂದು ಶ್ರೀನಿವಾಸ ಮೂರ್ತಿ ಘಟನೆಯ ಬಗ್ಗೆ ಸ್ಪಷ್ಟನೆ ಕೊಟ್ಟರು.
Advertisement
ಈ ರೀತಿ ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಆಗಲಿ. 25 ವರ್ಷದಿಂದ ಇಂತಹ ಘಟನೆ ಆಗಿರಲಿಲ್ಲ. ಯಾರೇ ಇದ್ದರೂ ಅವರನ್ನು ಬಂಧಿಸಿ. ಈಗ ಸರ್ಕಾರ ನಮ್ಮ ರಕ್ಷಣೆಗೆ ಬರಬೇಕು. ಮನೆಯನ್ನು ಸುಟ್ಟಿದ್ದಲ್ಲದೇ ಲೂಟಿ ಕೂಡ ಮಾಡಿದ್ದಾರೆ. ಹಣ, ಒಡವೆ, ಸೀರೆ ಎಲ್ಲವನ್ನು ದೋಚಿಕೊಂಡು ಹೀಗಿದ್ದಾರೆ. ಗ್ಯಾಸ್ ಕೂಡ ಆನ್ ಮಾಡುವುದಕ್ಕೆ ಹೋಗಿದ್ದರು. ನಾನು ಮನೆಯ ಸಮೀಪ ಹೋಗುತ್ತಿದ್ದೆ ಅಷ್ಟರಲ್ಲಿ ಸ್ಥಳೀಯರು ಫೋನ್ ಮಾಡಿ ಮಾಹಿತಿ ನೀಡಿದರು. ತಕ್ಷಣ ನಾನು ವಾಪಸ್ಸಾದೆ. ಹೀಗಾಗಿ ನಾನು ಬದುಕಿರುವುದೇ ಹೆಚ್ಚು ಎಂದು ಶ್ರೀನಿವಾಸ ಮೂರ್ತಿ ಕಣ್ಣೀರು ಹಾಕಿದರು.
Advertisement
ದುಷ್ಕರ್ಮಿಗಳು ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚುವಷ್ಟರಲ್ಲಿ ಪೊಲೀಸರು ಬಂದರು. ಆದ್ದರಿಂದ ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ಸಿಬಿಐ, ಸಿಸಿಬಿ, ಸಿಐಡಿ ಯಾವುದಾದರೂ ತನಿಖೆ ಮಾಡಿಸಿ. ನಮ್ಮ ಪರಿಸ್ಥಿತಿ ಹೀಗೆ ಆದರೆ ಇನ್ನೂ ಸಾರ್ವಜನಿಕರ ಪರಿಸ್ಥಿತಿ ಹೇಗೆ ಎಂದು ಪ್ರಶ್ನೆ ಮಾಡಿದರು. ಹೆಚ್ಚು ಮತದಲ್ಲಿ ಗೆದ್ದವನು ನಾನು. ನನಗೆ ಹೀಗೆ ಆಗಿದೆ. ಆದ್ದರಿಂದ ಈಗ ನನಗೆ ಸರ್ಕಾರ ರಕ್ಷಣೆ ಕೊಡಬೇಕು. ನಾವೆಲ್ಲರು ಒಟ್ಟಾಗಿ ಹೋಗೋಣ ಎಂದರು.
ನವೀನ್ ನಮ್ಮ ಅಕ್ಕನ ಮಗ, 10 ವರ್ಷದಿಂದ ನಾವು ಅವರಿಂದ ದೂರ ಇದ್ದೇವೆ. ನಮಗೂ ಅವನಿಗೂ ಸಂಬಂಧ ಇಲ್ಲ. ಯಾರೇ ಇದ್ದರೂ ತನಿಖೆ ಆಗಲಿ, ನನಗೂ ಅವನಿಗೂ ಸಂಬಂಧ ಇಲ್ಲ. ನಮ್ಮ ಹೆಸರು ಕೆಡಿಸಲು ಹೀಗೆ ಮಾಡಿದ್ದಾರೆ. ನಾನು 24 ಗಂಟೆ ಜನರ ಮಧ್ಯೆ ಇದ್ದೋನು. ಹೀಗಾಗಿ ಹೆಸರು ಕೆಡಿಸಲು ಮಾಡಿದ್ದಾರೆ. ಪ್ರಕರಣದ ತನಿಖೆ ಆಗಲಿ, ಪೊಲೀಸ್ ಸಾರಥಿ ಇದಕ್ಕೂ ಸಂಬಂಧವಿಲ್ಲ. ಘಟನೆಯನ್ನು ನಾನು ಖಂಡಿಸುತ್ತೇನೆ, ಯಾರೇ ಆದರೂ ಶಿಕ್ಷೆ ಆಗಲಿ ಎಂದು ಹೇಳಿದರು.
ನವೀನ್ ಬಿಜೆಪಿ ಅಭಿಮಾನಿ ಅನ್ನೋದನ್ನ ಅವನನ್ನ ಕೇಳಿ. ನಮಗೂ ಅವನಿಗೂ ಸಂಬಂಧ ಇಲ್ಲ. ಸಿಎಂಗೂ ರಕ್ಷಣೆ ಕೊಡಲು ಮನವಿ ಮಾಡಿದ್ದೇನೆ. ರಕ್ಷಣೆ ಕೊಡೋದಾಗಿ ಸಿಎಂ ಕೂಡ ಹೇಳಿದ್ದಾರೆ. ಸಿಬಿಐ, ಸಿಸಿಬಿ, ಸಿಐಡಿ ಯಾವುದಾದರೂ ಮಾಡಲಿ, ಘಟನೆ ಆದ ಮೇಲೂ ನಾನು ನವೀನ್ ಹತ್ತಿರ ಮಾತಾಡಿಲ್ಲ ಎಂದು ಅಖಂಡ ಶ್ರೀನಿವಾಸ ಮೂರ್ತಿ ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.