ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲು ಮುಂದಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ಇಮ್ರಾನ್ ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲಿದ್ದಾರೆ. ಈ ಕುರಿತಾಗಿ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. 2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.
Advertisement
Advertisement
ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ: 45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Advertisement
ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿ ಇದೀಗ ಬಾಡಿಗೆಗೆ ನೀಡುತ್ತಿರುವುದ್ಯಾಕೆ ಎಂಬುದಕ್ಕೆ ಉತ್ತರ ಹಣಕಾಸಿನ ಕೊರತೆಯಾಗಿದೆ. ಈ ಹಿಂದೆ ಇಮ್ರಾನ್ಖಾನ್ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೆ ಸುದ್ದಿಯಾಗಿದ್ದರು. ಇದೀಗ ನಿವಾಸವನ್ನು ಬಾಡಿಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.