ಬೆಂಗಳೂರು: ಮದುವೆಯಾದ ಒಂದೇ ವಾರಕ್ಕೆ ಕೊರೊನಾಗೆ ವರ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿ ಕೇರಳ ಮೂಲದವರಾಗಿದ್ದು, ಪಿಜಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜೀವನ ಕಂಡುಕೊಂಡಿದ್ದರು. ವಾರದ ಹಿಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೊದಲು ಮೈ-ಕೈ ನೋವು, ಸುಸ್ತು ಕಂಡು ಬಂದ ಹಿನ್ನೆಲೆ ಕಾರಂತ್ ಆಸ್ಪತ್ರೆಗೆ ಹೋಗಿದ್ದಾರೆ. ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಿಸಿ ಮೈ-ಕೈ ನೋವಿಗೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಕೊಟ್ಟು ಕಳುಹಿಸಿದ್ದಾರೆ.
Advertisement
Advertisement
ಕಾರಂತ್ ಆಸ್ಪತ್ರೆಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಬೆಡ್ ಸಿಗದ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದಾರೆ. ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮದುವೆಯಾದ ವಾರದಲ್ಲಿಯೇ ಪತಿಯನ್ನ ಕಳೆದುಕೊಂಡ ಪತ್ನಿ ಗೋಳಾಟ ಕರುಳು ಹಿಂಡುವಂತಿತ್ತು.