ಬೆಂಗಳೂರು: ಇಂದಿನಿಂದ ಬುಕ್ ಮಾಡುವ ಮದುವೆಗಳಿಗೆ ಪಾಸ್ ಕಡ್ಡಾಯ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ಬೇಕಿಲ್ಲ. ಆದರೆ ಇವತ್ತಿನಿಂದ ಬುಕ್ ಆಗುವ ಮದುವೆಗಳಿಗೆ ಪಾಸ್ ಕಡ್ಡಾಯ ಎಂದು ಹೇಳಿದರು.
Advertisement
Advertisement
ಕಲ್ಯಾಣ ಮಂಟಪಗಳಲ್ಲಿ 100 ಮಂದಿಗಷ್ಟೇ ಅವಕಾಶ ನೀಡಲಾಗುತ್ತದೆ. ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಸೇರಿದರೆ ಎಫ್ಐಆರ್ ದಾಖಲಿಸಲಾಗುತ್ತದೆ. ಮದುವೆ ಪಾಸ್ ಗಳನ್ನು ಮದುವೆ ಆಯೋಜಕರೇ ವಿತರಣೆ ಮಾಡಬೇಕು. ಹೆಚ್ಚಿನ ಪಾಸ್ ಕೊಟ್ಟಿದ್ದರೆ ಕಲ್ಯಾಣ ಮಂಟಪ ಮಾಲೀಕರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಅಲ್ಲದೆ ಮದುವೆ ಮಾಡುವ ಕುಟುಂಬಸ್ಥರ ವಿರುದ್ಧ ಎಫ್ಐಅರ್ ದಾಖಲಿಸಲಾಗುತ್ತದೆ ಎಂದರು.
Advertisement
Advertisement
50 ಪಾಸ್ ಗಳನ್ನು ಅಲ್ಲಿನ ತಹಶೀಲ್ದಾರರು ಇಶ್ಯೂ ಮಾಡಿ ಆಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮಂಟಪದ ಒಳಗೆ ಆದರೆ 100, ಹೊರಗಡೆ ಆದರೆ 200 ಜನ ಅಷ್ಟೆ ಇರಬೇಕು. ಸರ್ಕಾರ ನಿಗದಿ ಮಾಡಿರುವ ಪಾಸ್ ಅಷ್ಟೆ ಕೊಡೋದು. ಅದಕ್ಕಿಂತ ಹೆಚ್ಚಾದರೆ ನಾವು ಕಲ್ಯಾಣ ಮಂಟಪವನ್ನೇ ಮುಚ್ಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.