ತಿರುವನಂತಪುರ: ಕೇರಳದ ಕೋಯಿಕ್ಕೋಡ್ ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ಯುವ ಜೋಡಿ ಸರ್ಕಾರದ ದ್ವಂದ್ವ ನೀತಿ ವಿರೋಧಿಸಿ ಮದ್ಯದಂಗಡಿ ಮುಂದೆ ಮದುವೆಯಾಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ರಾಮನಟ್ಟುಕರದ್ ಪ್ರಮೋದ್ ಮತ್ತು ಪಂತೀರನ್ ಕವಿನ್ ಧನ್ಯಾ ಮದುವೆಯಾದ ಜೋಡಿ. ಸರ್ಕಾರದ ನೀತಿ ಖಂಡಿಸಿ ನಡೆದ ಈ ಮದುವೆಗೆ ಸಂಸದ ಎಂ.ಕೆ.ರಾಘವನ್ ಮತ್ತು ಕ್ಯಾಟೆರಿಂಗ್ ಸರ್ವಿಸ್ ಸಂಘದ ಸದಸ್ಯರು ಹಾಜರಿದ್ದರು. ಮದುವೆಗೂ ಮುನ್ನ ಮಾತನಾಡಿದ ಸಂಸದ ಎಂ.ಕೆ.ರಾಘವನ್, ಮದುವೆ ಕ್ಯಾಟೆರಿಂಗ್ ಸರ್ವಿಸ್ ನಲ್ಲಿ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರ ಮಾತ್ರ 50ಕ್ಕಿಂತ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆದೇಶ ನೀಡಿದೆ. ಆದ್ರೆ ಈ ಆದೇಶ ಮದ್ಯದಂಗಡಿಗಳಿಗೆ ಯಾಕೆ ಅನ್ವಯ ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಕೊರೊನಾ ಹಿನ್ನೆಲೆ ಕೇರಳ ಸರ್ಕಾರ ಅದ್ಧೂರಿ ಮದುವೆಗಳಿಗೆ ಬ್ರೇಕ್ ಹಾಕಿದೆ. ಮದುವೆಯಲ್ಲಿ ಹೆಚ್ಚು ಜನರು ಭಾಗಿಯಾದ್ರೆ ಕುಟುಂಬಗಳ ಪ್ರಕರಣ ದಾಖಲಾಗಿಸುತ್ತಿದೆ. ಆದ್ರೆ ಮದ್ಯದಂಗಡಿಗಳ ಮುಂದೆ ಕೊರೊನಾ ನಿಯಮಗಳನ್ನೇ ಪಾಲನೆ ಮಾಡುತ್ತಿಲ್ಲ. ಆದ್ರೆ ಅಲ್ಲಿ ಅಂಗಡಿ ಅಥವಾ ಗ್ರಾಹಕರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ಈ ದ್ವಂದ್ವ ನೀತಿ ವಿರೋಧಿಸಿ ಜೋಡಿ ಮದ್ಯದಂಗಡಿ ಮುಂದೆಯೇ ಮದುವೆಯಾಗಿದ್ದಾರೆ.