ಮೈಸೂರು: ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಮುಂದುವರಿದಿದ್ದು, ಮತ್ತೆ ಡಿಸಿ ವಿರುದ್ಧ ಪ್ರತಾಪ್ ಸಿಂಹ ಮುಗಿಬಿದ್ದಿದ್ದಾರೆ.
Advertisement
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಸರಕಾರಿ ನಿವಾಸದಲ್ಲಿ ನಿರ್ಮಿಸಿರುವ ಸ್ವಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ? ನಾನು ಬಹಳ ಲೆಕ್ಕ ಕೇಳಿದ್ದೆ. ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ? ಯಾವುದೋ 2.4.5 ಅಂತ ರೌಂಡ್ ಫಿಗರ್ ಲೆಕ್ಕ ಕೊಡೋದು ಅಲ್ಲ. ಲೆಕ್ಕಕೊಡೊದಾದ್ರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ ಎಂದು ಕಿಡಿಕಾರಿದ್ದಾರೆ.
Advertisement
Advertisement
ಸ್ಟೆಪ್ ಡೌನ್ ಆಸ್ಪತ್ರೆಗಳ ಬಗ್ಗೆಯೂ ಕೇಳಿದ್ದೆ ಅದಕ್ಕೆ ಉತ್ತರ ಕೊಟ್ಟಿದ್ದಾರಾ..? ಸ್ವಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ, ಅದಕ್ಕೆ ಕೊಟ್ಟಿದ್ದಾರಾ..? ಸುಮ್ಮನೆ ಹೋಟೆಲ್ ಗಳಿಗೆ 4 ಕೊಟಿ ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಬೇಕಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ
Advertisement
ಅಭಿರಾಂ ಜಿ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು, ಅದಕ್ಕೆ ಕೇಳಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತ್ತಿಲ್ಲ. ಹೀಗಾಗಿ ಲೆಕ್ಕ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇಂತಹ ಅಧಿಕಾರಿಗಳಿಂದ ನಾವು ಪಾಠ ಕಲಿಯಬೇಕಾಗಿಲ್ಲ: ಪ್ರತಾಪ್ ಸಿಂಹ
ನಾನು ಇನ್ನು ಮುಂದೆ ಯಾರ ಬಗ್ಗೆ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿ ನಾನು ನಿಭಾಯಿಸುತ್ತೆನೆ. ವ್ಯಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡು ಮಾಡುತ್ತೇನೆ. ನನ್ನ ಕೆಲಸಕ್ಕೆ ಬೆರಳು ತೋರಿಸಿ ಯಾರು ಮಾತನಾಡಬಾರದು. ಆ ರೀತಿ ಕೆಲಸ ಮಾಡುತ್ತೇನೆ ಎಂದರು.