ಬೆಂಗಳೂರು: ಆರ್.ಆರ್ ನಗರ ಮತ್ತು ಶಿರಾ ಉಪಚುನಾವಣೆಯ ಮತದಾನ ಆರಂಭವಾಗಿದ್ದು, ಮತದಾನಕ್ಕೆ ಜನರು ಉತ್ಸುಕತೆಯಿಂದ ಭಾಗಿಯಾಗಿದ್ದಾರೆ. ನಟಿ ಅಮೂಲ್ಯ ಅವರು ಕುಟುಂಬದೊಂದಿಗೆ ಆಗಮಿಸಿ ಆರ್.ಆರ್ ನಗರದ ಬೂತ್ ನಂಬರ್ 369ರ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಮತದಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಅಮೂಲ್ಯ ಅವರು, ಕೊರೊನಾ ಕಾರಣದಿಂದ ಮತದಾನ ಕಷ್ಟ ಎಂದುಕೊಂಡಿದ್ದೇವು. ಆದರೆ ಕೆಲವರು ವೀಲ್ ಚೇರ್ ನಲ್ಲೂ ಬಂದ್ ಮತದಾನ ಮಾಡುತ್ತಿದ್ದಾರೆ. ಎಲ್ಲರೂ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತಿಯೊಂದು ಬೂತ್ನಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದ್ದರಿಂದ ಯುವ ಜನತೆ ಸೇರಿದಂತೆ ಎಲ್ಲರೂ ದಯವಿಟ್ಟು ಬಂದು ಮತದಾನ ಮಾಡಿ ಎಂದು ಮನವಿ ಮಾಡಿದರು.
Advertisement
Advertisement
ಕೊರೊನಾ ಸೋಂಕಿನ ಸಂಕಷ್ಟದ ನಡುವೆಯೇ ಮತದಾನಕ್ಕೆ ಬರುವವರಿಗೆ ಹೆಚ್ಚಿನ ಸೌಲಭ್ಯಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಒಂದೊಮ್ಮೆ ಮತದಾನಕ್ಕೆ ಬರುವವರಿಗೆ ಟೆಂಪರೇಚರ್ ಹೆಚ್ಚಾಗಿದ್ದಾರೆ ಅವರಿಗೆ ಸಂಜೆ 5 ಗಂಟೆಯ ಬಳಿಕ ಅವಕಾಶ ನೀಡಲಾಗುತ್ತಿದೆ. ಕೊರೊನಾ ಸೋಂಕಿತರಿಗೂ ಕೂಡ ಸಂಜೆ 5 ಗಂಟೆ ಬಳಿಕ ಪಿಪಿಇ ಕಿಟ್ ಧರಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.
Advertisement
ಮತದಾನ ಕೇಂದ್ರದ ಬಳಿ ನೂಕುನುಗ್ಗಲಿಗೆ ಅವಕಾಶ ನೀಡದಂತೆ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಮಾರ್ಕ್ ಮಾಡಲಾಗಿದೆ. ಹೆಚ್ಚು ಜನರು ಆಗಮಿಸಿದರಿಗೆ ಟೋಕನ್ ವ್ಯವಸ್ಥೆ ಜಾರಿ ಮಾಡಲು ಆಯೋಗ ಸಿದ್ಧವಾಗಿದೆ. ಮತಗಟ್ಟೆಯನ್ನು ಸೋಂಕು ನಿವಾರಕ ದ್ರಾವಣ ಹಾಕಿ ಸ್ವಚ್ಛಗೊಳಿಸಿ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ.