– ಕುಶಾಲನಗರದ ಸಾಯಿ ಬಡಾವಣೆ ಸಹ ಮುಳುಗಡೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಗುಡ್ಡ ಕುಸಿತ, ಮರ ಧರೆಗುರುಳುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಪ್ರವಾಹ ಹೆಚ್ಚಾದ ಹಿನ್ನೆಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮ ಮುಳುಗಡೆಯಾಗಿದೆ.
Advertisement
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮ ಮುಳುಗಡೆಯಾಗಿದ್ದು, 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕರಡಿಗೋಡಿನ 12 ಕುಟುಂಬಗಳನ್ನು ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಸ್ಥಳೀಯರು ತೆಪ್ಪಗಳಲ್ಲಿ ಜನರನ್ನು ಶಿಫ್ಟ್ ಮಾಡುತ್ತಿದ್ದು, ಭಾರೀ ಮಳೆಯಿಂದಾಗಿ ಕರಡಿಗೋಡು ಜನ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
Advertisement
ಕುಶಾಲನಗರದ ಸಾಯಿ ಬಡಾವಣೆ ಸಹ ಮತ್ತೆ ಮುಳುಗಡೆಯಾಗಿದ್ದು, ಹತ್ತಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಸತತ ಮೂರನೇ ವರ್ಷವೂ ಸಾಯಿ ಬಡಾವಣೆ ಮುಳುಗಡೆಯಾಗಿದ್ದು, ಕೊಡಗು ಜನತೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ವಸ್ತುಗಳನ್ನು ಜನ ಬೇರೆಡೆಗೆ ಸಾಗಿಸುತ್ತಿದ್ದಾರೆ.