– ಮಗು ಅಪಾಯದಿಂದ ಪಾರು, ಮಹಿಳೆ ಸಾವು
ತಿರುವನಂತಪುರಂ: ಆಟವಾಡಲು ಹೋಗಿ ಟೇರಸ್ನಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಲು ಹೋದ ಮಹಿಳೆ ಮೂರು ಮಹಡಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ನೀಮಾ ಮಗುವಿನ ರಕ್ಷಣೆಗೆಂದು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಈಕೆ ಪತಿ ಅಬು ಫಜಲ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ನೀಮಾ ಗುರುವಾರ ಅಪಾರ್ಟ್ ಮೆಂಟ್ ನಿಂದ ಬಿದ್ದು ಸಾವನ್ನಪ್ಪಿದ್ದಾಳೆ.
Advertisement
Advertisement
ನೀಮಾ ತನ್ನ ಆರು ತಿಂಗಳ ಮಗು ಜೊತೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಆಟವಾಡಲು ಟೆರೇಸ್ ಮೇಲೆ ಹೋಗಿದ್ದಾಳೆ. ಈ ವೇಳೆ ಬೀಳುತ್ತಿದ್ದ ಮಗು ರಕ್ಷಿಸಲು ಹೋಗಿ ತಾನೇ ಬಿದ್ದು ಸಾವನ್ನಪ್ಪಿದ್ದಾಳೆ. ನೀಮಾ ಇತ್ತೀಚೆಗೆ ತಮ್ಮ ಮನೆ ಮಾರಾಟ ಮಾಡಿದ್ದಳು, ಹೀಗಾಗಿ ತಮ್ಮ ಸಹೋದರಿ ಮನೆಯಲ್ಲಿ ವಾಸವಿದ್ದಳು. ಮಗು ಬೀಳುವುದನ್ನು ತಪ್ಪಿಸಲು ಹೋಗಿ ನೀಮಾ ಕಟ್ಟಡದಿಂದ ಹಾರಿದ್ದಾಳೆ.
Advertisement
Advertisement
ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ತಲೆಗೆ ಪೆಟ್ಟು ಬಿದ್ದ ಕಾರಣ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆಯ ತಲೆ ಬುರುಡೆ ಆರು ಕಡೆ ಗಾಯವಾಗಿತ್ತು ಹೀಗಾಗಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.