ಬೆಂಗಳೂರು: ಮಕ್ಕಳು ವಿದ್ಯೆಗೆ ಸಹಕಾರಿಯಾಗುವಂತೆ ಟ್ಯಾಬ್ ಬಳಸಿಕೊಳ್ಳಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದರು.
‘ಜ್ಞಾನ ದೀವಿಗೆ’ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳು ಇಂದು ಯಾವುದೇ ಕಾರಣದಿಂದ ಹಿಂದೆ ಬಿದ್ದಿಲ್ಲ. ಬೆಳ್ತಂಗಡಿ ತಾಲೂಕು ಹಾಗೂ ಇತರ ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಎಂಬ ಬೇಧ ತೊರೆದು ಎಲ್ಲರೂ ಒಂದೇ ಭಾವದಲ್ಲಿರಬೇಕು ಎಂದರು.
Advertisement
Advertisement
ಗ್ರಾಮೀಣ ಪ್ರದೇಶದ ಜನತೆಗೆ ಫೋನ್, ಲ್ಯಾಪ್ಟಾಪ್, ಟ್ಯಾಬ್ ಬಳಕೆ ತಿಳಿದಿಲ್ಲ. ಹೀಗಾಗಿ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೆ ವಿದ್ಯೆಗೆ ಖರ್ಚು ಮಾಡುವ ಬದಲು ಇನ್ಯಾವುದಕ್ಕೋ ಖರ್ಚು ಮಾಡುತ್ತೇವೆ. ವಿದ್ಯೆಗೆ ಸಂಬಂಧಿಸಿದ ವಸ್ತುಗಳಿಗೆ ಖರ್ಚು ಮಾಡಲು ಹಣವಿಲ್ಲ ಎನ್ನುತ್ತೇವೆ. ಆದರೆ ಇದೀಗ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆಯ ಈ ಕೆಲಸದಿಂದ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ
Advertisement
Advertisement
ಯಾರು ಕೂಡ ಟ್ಯಾಬ್ ದುರುಪಯೋಗಪಡಿಸಿಕೊಳ್ಳದೆ, ಇದರ ಗಂಭೀರತೆಯನ್ನು ಅರಿತು ಮಕ್ಕಳ ಉಪಯೋಗಕ್ಕೆ ಮಾತ್ರ ಮೀಸಲಿಡಬೇಕು. ಇತರೆ ಮನರಂಜನೆಯನ್ನು ಬಿಟ್ಟು, ಟ್ಯಾಬ್ ನ್ನು ಸರಿಯಾಗಿ ಬಳಸಬೇಕು. ಲ್ಯಾಪ್ಟಾಪ್ ಹಾಗೂ ಟ್ಯಾಬ್ಗಳ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ನಾವೂ ಸಹ ಸುಮಾರು 20 ಸಾವಿರ ಟ್ಯಾಬ್ ಹಾಗೂ 10 ಸಾವಿರ ಟ್ಯಾಪ್ಟಾಪ್ ಖರೀದಿಸಿದ್ದೇವೆ. ಸೋಮವಾರ ಮುಖ್ಯಮಂತ್ರಿಗಳು ರಾಜ್ಯದ ವಿವಿಧೆಡೆ ವಿತರಿಸಲಿದ್ದಾರೆ ಎಂದರು. ಇದನ್ನೂ ಓದಿ: ವಿವಿಧ ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ
ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹೆಚ್ಚು ಮಾಹಿತಿ ಇದೆ. ಮೊಬೈಲ್ನಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಹೀಗಾಗಿ ಮಕ್ಕಳಿಗೆ ಮೊಬೈಲ್ ಬಳಕೆ ಕುರಿತು ಅರಿವು ಮೂಡಿಸಬೇಕು. ಬದುಕಿಗೆ ಉಪಯುಕ್ತವಾದ ವಸ್ತು ಎಂದು ತಿಳಿದು ಇದನ್ನು ಬಳಸಬೇಕು.
ಸಚಿವರು ಸಹ ತುಂಬಾ ಪ್ರಾಕ್ಟಿಕಲ್ ಆಗಿ ಕಳೆದ ಆರು ತಿಂಗಳಿಂದ ವ್ಯವಸ್ಥೆ ಮಾಡಿದ್ದಾರೆ. ಒಳ್ಳೆಯ ರೀತಿಯಲ್ಲಿ ಎಲ್ಲ ಕೆಲಸಗಳು ನಡೆಯಲಿ. ತುಂಬಾ ಕಷ್ಟದ ಇಲಾಖೆ ಶಿಕ್ಷಣ ಇಲಾಖೆ. ಸಚಿವರು ತುಂಬಾ ಕ್ರಮ ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.