ಮಂಡ್ಯ: ಜಿಲ್ಲೆಯ ಕೆಆರ್ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮದಲ್ಲಿ ಪುರಾತನ ಜೈನ ಬಸದಿಯ ಅವಶೇಷಗಳ ಜೊತೆಗೆ ಐತಿಹಾಸಿಕ ಜಿನ ಬಿಂಬ(ಜೈನರ ಮೂರ್ತಿ) ದೊರೆತಿವೆ.
ಇವು 7 ತೀಥರ್ಂಕರ ಸುಪಾರ್ಶ್ವನಾಥ ಅಥವಾ 23ನೇ ತೀಥರ್ಂಕರ ಪಾಶ್ರ್ವನಾಥನ ಬಿಂಬ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಈ ಬಿಂಬ ಹಾವಿನ ಹೆಡೆ (ನಾಗಾತಪತ್ರ) ಇರುವುದರಿಂದ ಪಾರ್ಶ್ವನಾಥನ ಎನ್ನಲಾಗತ್ತಿದೆ. ಬಿಂಬದ ಪೀಠ ಮಾಸಿರುವುದರಿಂದ ಅಲ್ಲಿ ಸ್ವಸ್ತಿಕ್ ಚಿಹ್ನೆ ಇದೆಯೋ ಅಥವಾ ಸರ್ಪ ಚಿಹ್ನೆ ಇದೆಯೋ ಎಂಬುದು ಸ್ಪಷ್ಟವಾಗಿ ಕಾಣುತ್ತಿಲ್ಲ. ಸ್ವಸ್ತಿಕ್ ಚಿಹ್ನೆ ಇದ್ದರೆ ಸುಪಾರ್ಶ್ವನಾಥ ಎಂತಲೂ, ಪೀಠದಲ್ಲಿ ಸರ್ಪ ಚಿಹ್ನೆ ಇದ್ದರೆ, ಪಾರ್ಶ್ವನಾಥನ ಬಿಂಬ ಎಂದು ಹೇಳಬಹುದಿತ್ತು. ಇದನ್ನೂ ಓದಿ: ಅಕ್ರಮವಾಗಿ ಮದ್ಯ ಮಾರಾಟ -ದಂಧೆಕೋರ ಅಂದರ್
Advertisement
Advertisement
ಬಿಂಬ ಖಡ್ಗಾಸನ ಅಥವಾ ಕಾರ್ಯೋಗಾಸದ ಸ್ಥಿತಿಯಲ್ಲಿದೆ. ಬಿಂಬದ ಸ್ಥಿತಿ 12ನೇ ಶತಮಾನದ ಹಿಂದಿನದಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಊರಿನಲ್ಲಿ ಜೈನ ಬಸದಿ ಇಲ್ಲ. ತುಂಬಾ ಹಳೆಯದಾಗಿರುವುದರಿಂದ ನೆಲಸಮವಾಗಿದೆ. ಈ ಬಗ್ಗೆ ಕುರುಹಗಳು ಸಿಗುತ್ತವೆ. ಈ ಸಂಬಂಧ ಗ್ರಾಮಸ್ಥರು ಬಸದಿ ಇದ್ದ ಬಗ್ಗೆ ತಮ್ಮ ಪೂರ್ವಜರು ಹೇಳುತ್ತಿದ್ದರು ಎಂಬ ಮಾತುಗಳಿವೆ. ಬಸದಿಯಲ್ಲಿದ್ದ ಕೆತ್ತನೆಯ ಕಲ್ಲುಗಳು ಗ್ರಾಮದ ಶಿವನ ದೇವಾಲಯದ ಬಳಿ ಪತ್ತೆಯಾಗಿವೆ. ಬಸದಿ ಬಗ್ಗೆ ಸಂಶೋಧನೆ ನಡೆಸಿ, ಉತ್ಖನನ ಮಾಡಿದರೆ ಮತ್ತಷ್ಟು ಮಾಹಿತಿ ಮತ್ತು ಮೂರ್ತಿಗಳು ಸಿಗಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಕ್ಕೆ ಸರ್ಕಾರ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಲಾಕ್ ವಿಸ್ತರಣೆಯಾದ ಜಿಲ್ಲೆಗಳಲ್ಲಿ ಕಂಟ್ರೋಲ್ಗೆ ಬಾರದ ಪಾಸಿಟಿವಿಟಿ ರೇಟ್
Advertisement
ಮೂರ್ತಿ ಸುಮಾರು 5.5 ಅಡಿ ಎತ್ತರವಿದ್ದು, ಇದು ತುಂಬಾ ಹಳೆಯದಾಗಿದೆ. ಪೀಠದಲ್ಲಿನ ಚಿಹ್ನೆಗಳು ಮಾಸಿದ್ದು, ಅಸ್ಪಷ್ಟವಾಗಿ ಕಾಣುತ್ತಿವೆ. ಖಡ್ಗಾಸನ ಭಂಗಿಯಲ್ಲಿ ತಪಸ್ಸು ಮಾಡುತ್ತಿದ್ದಾರೆ. ಶಿರದ ಹಿಂಬದಿಯಲ್ಲಿ ಪ್ರಭಾಮಂಡಲ ಮತ್ತು ಮೇಲ್ಭಾಗದಲ್ಲಿ ಎಡೆ ಬಿಚ್ಚಿದ್ದ ಸರ್ಪದ ಚಿತ್ರವಿದೆ. ಇದನ್ನೂ ಓದಿ: ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ
Advertisement
ಪತ್ತೆ ಹೇಗೆ:
ಹವ್ಯಾಸಿ ಸಂಶೋಧಕ, ಶಿಕ್ಷಕ ರಂಗಸ್ವಾಮಿ, ಸಂತೇಬಾಚಹಳ್ಳಿ ಮಾರ್ಗ ಸಂಚರಿಸುವಾಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಲ್ಲನ್ನು ವೀಕ್ಷಣೆ ಮಾಡುತ್ತಿದ್ದರು. ಅಲ್ಲಿದ್ದ ಕುರಿಗಾಯಿಯನ್ನು ವಿಚಾರಿಸಿ ಇದು ಶಿಲಾಯುಗದ ಕಲ್ಲು. ಇಲ್ಲಿ ಮತ್ಯಾವಾದರೂ ಮೂರ್ತಿಗಳಿವೆಯಾ ಎಂದು ಪ್ರಶ್ನಿಸಿದಾಗ, ಆತ ಶಿಕ್ಷಕನನ್ನು ಜೈನ್ ಮೂರ್ತಿ ಬಳಿಗೆ ಕರೆದೊಯ್ದಿದ್ದಾನೆ. ಮೂರ್ತಿ ಗ್ರಾಮದ ಬೆಟ್ಟಪ್ಪಗೌಡರ ಜಮೀನಿನ ಬದಿಯಲ್ಲಿತ್ತು. ಅವರ ಜಮೀನಿನ ಉಳುಮೆ ಮಾಡುವಾಗ ಕಂಡ ಕಾರಣ ಅದನ್ನು ಬದಿಗಿರಿಸಿದ್ದಾರೆ. ಈ ಮೂರ್ತಿಯ ಫೋಟೋವನ್ನು ಶಿಕ್ಷಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದರ ಐತಿಹ್ಯವನ್ನು ಅಡಿಬರಹದಲ್ಲಿ ಬರೆದಿದ್ದಾರೆ. ಇದು ವೈರಲ್ ಆದ ಬಳಿಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದೆ. ನಂತರ ಮೂರ್ತಿ ವೀಕ್ಷಣೆಗೆ ಗ್ರಾಮಸ್ಥರು ಮುಂದಾಗಿದ್ದಾರೆ.