ಬೆಂಗಳೂರು: ಮಂಡ್ಯ ಗಣಿ ಜಂಜಾಟದಲ್ಲಿ ರಾಜ್ಯ ಕಾಂಗ್ರೆಸ್ ಎಂಟ್ರಿ ಮೂಲಕ ಹೊಸ ರಾಜಕೀಯ ತಿರುವು ಪಡೆಯುತ್ತಾ..?, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾದ್ರ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Advertisement
ಅಕ್ರಮ ಗಣಿಗಾರಿಕೆ ಸಿದ್ದರಾಮಯ್ಯ ಪಾಲಿಗೆ ಪ್ರಬಲ ರಾಜಕೀಯ ಅಸ್ತ್ರವಾಗಿದ್ದು, ಮುಂದಿನವಾರ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಮಂಡ್ಯದ ಗಣಿಗಾರಿಕಾ ಪ್ರದೇಶದಲ್ಲಿ ಸಿದ್ದರಾಮಯ್ಯ ಪರಿಶೀಲನೆ ಸಾಧ್ಯತೆ ಇದ್ದು, ಈ ಮೂಲಕ ಎಚ್ಡಿಕೆ-ಡಿಕೆಶಿಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ರೆಡಿಯಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ
Advertisement
Advertisement
ಒಂದು ವೇಳೆ ಗಣಿ ಅಕ್ರಮ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಒತ್ತಾಯ ಮಾಡು ಸಾಧ್ಯೆತೆಗಳಿವೆ. ಈ ಮೂಲಕ ರಾಜಕೀಯ ದಾಳ ಉರುಳಿಸಲು ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಗಣಿಗಾರಿಕೆ ವೀಕ್ಷಣೆಗೆ ಜೆಡಿಎಸ್ ಶಾಸಕರು ಬರುವುದಾದರೆ ಸ್ವಾಗತ: ಸುಮಲತಾ
Advertisement
ಹೆಚ್ಡಿಕೆ ಗಣಿ ಅಕ್ರಮದ ಪರ ಇದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಆರೋಪ ಮಾಡುತ್ತಿದ್ದಾರೆ. ಮಂಡ್ಯ ಗಣಿ ಅಕ್ರಮ ವಿಚಾರದಲ್ಲೂ ಡಿಕೆಶಿ ಕೂಡ ಸಾಫ್ಟ್ ಕಾರ್ನರ್ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಡಿಕೆ, ಡಿಕೆಶಿ ವಿರುದ್ಧ ರಾಜಕೀಯ ಅಸ್ತ್ರ ಬಳಸಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದು, ಕುಮಾರಸ್ವಾಮಿ, ಡಿಕೆಶಿ ಇಬ್ಬರಿಗೂ ಟಕ್ಕರ್ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.