ಬೆಂಗಳೂರು: ಕೆ.ಎಸ್.ಆರ್ ಕದನಕ್ಕೆ ವಿರಾಮ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರಾಮ ಹಾಕಿದ್ದಾರೆ. ಸಂಸದೆ ಸುಮಲತಾ ನಡುವಿನ ಫೈಟ್ ಗೆ ಹೆಚ್ಡಿಕೆ ಬ್ರೇಕ್ ಹಾಕಿದ್ದಾರೆ. ಹಾದಿ-ಬೀದಿ ರಂಪಾಟ ಬೇಡ ಅಂತ ದೇವೇಗೌಡರು ಸಲಹೆ ನೀಡಿದ್ರಿಂದ ಮಾಜಿ ಸಿಎಂ ಸದ್ಯಕ್ಕೆ ಮೌನವಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ದೇವೇಗೌಡರ ಸೂಚನೆಯಂತೆ ಹೆಚ್ಡಿಕೆ ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ಪರಸ್ಪರ ಕಿತ್ತಾಟ, ಮಾತಿನ ಕಚ್ಚಾಟಕ್ಕೆ ದೊಡ್ಡಗೌಡರು ಬ್ರೇಕ್ ಹಾಕಿಸಿದ್ದಾರೆ. ರಾಜಕೀಯ ಲೆಕ್ಕಾಚಾರದಿಂದ ಅಲರ್ಟ್ ಆದ ದೇವೇಗೌಡರು, ಮುಂದೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್ ಗೆ ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ. ಅಲ್ಲದೆ ತಾಳ್ಮೆಯಿಂದ ಇರುವಂತೆ ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರಿಗೆ ಹೆಚ್ಡಿಡಿ ಕಟ್ಟಪ್ಪಣೆ ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ಹೆಚ್ಡಿಡಿ ಮಾತಿನ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದು, ಪಕ್ಷಕ್ಕೆ ಆಗ್ತಿದ್ದ ದೊಡ್ಡ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ. ಅಷ್ಟಕ್ಕೂ ದೇವೇಗೌಡ ಕದನ ವಿರಾಮದ ಸಂದೇಶ ರವಾನೆ ಮಾಡಿದ್ದು ಯಾಕೆ?, ದೇವೇಗೌಡ ಮಾತು ಕೇಳಿ ಕುಮಾರಸ್ವಾಮಿ ಸೈಲೆಂಟ್ ಆಗಿದ್ದು ಯಾಕೆ ಎಂಬುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಇದನ್ನೂ ಓದಿ: ಅಕ್ಕಾ ನಮ್ಮ ಕ್ಷೇತ್ರಕ್ಕೂ ಬನ್ನಿ, ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ: ಸುರೇಶ್ಗೌಡ
Advertisement
ಕುಮಾರಸ್ವಾಮಿ ಮತ್ತು ಶಾಸಕರ ಹೇಳಿಕೆ ಇಟ್ಟುಕೊಂಡು ಸುಮಲತಾ ಜನರ ಅನುಕಂಪ ಗಿಟ್ಟಿಸಬಹುದು. ಇದು ಪಕ್ಷಕ್ಕೆ ಸಮಸ್ಯೆ ಆಗಬಹುದು. ಪದೇ ಪದೇ ಗಣಿಗಾರಿಕೆ ಪರ ಮಾತಾಡುತ್ತಿದ್ದರೆ ನಾವು ಅಕ್ರಮ ಗಣಿಗಾರಿಕೆ ಪರ ಇದ್ದಾರೆ ಅನ್ನೋ ಸಂದೇಶ ಹೋಗುತ್ತೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಶಾಸಕರಾಧಿಯಾಗಿ ಎಲ್ಲರೂ ಸುಮಲತಾ ವಿರುದ್ಧ ತಿರುಗಿ ಬಿದ್ದರೆ ಜೆಡಿಎಸ್ ಮಹಿಳಾ ವಿರೋಧಿ ಅಂತ ಇದನ್ನೇ ಅವರು ರಾಜಕೀಯ ದಾಳ ಮಾಡಿಕೊಳ್ಳಬಹುದು. ಇದನ್ನೂ ಓದಿ: ಕುಮಾರಣ್ಣ ಕೈಕಟ್ಟಿ ನಿಲ್ಲುವುದು ಭಯದಿಂದ ಅಲ್ಲ, ಸಂಸ್ಕಾರದಿಂದ – ಜೆಡಿಎಸ್ ಅಭಿಮಾನಿಗಳು
ಅಂಬರೀಶ್ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡೋದ್ರಿಂದ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗಬಹುದು. ಅಂಬರೀಶ್ಗೆ ರಾಜ್ಯಾದ್ಯಂತ ಅಭಿಮಾನಿಗಳು ಇದ್ದು, ಪದೇ ಪದೇ ಸುಮಲತಾ ಬಗ್ಗೆ ಮಾತಾಡೋದ್ರೀಂದ ಈ ವರ್ಷ ನಮ್ಮ ವಿರುದ್ಧ ತಿರುಗಿ ಬೀಳಬಹುದು. ಅಂಬರೀಶ್ ಮೃತರಾಗಿದ್ದಾರೆ. ಹೀಗಾಗಿ ಪದೇ ಪದೇ ಅವರ ಹೆಸರು ಬಳಕೆ ಮಾಡ್ತಿದ್ದರೆ ಅದು ಜನರಿಗೆ ತಪ್ಪು ಸಂದೇಶ ಹೋಗುತ್ತೆ ಎಂಬುದೇ ದೇವೇಗೌಡರ ಲೆಕ್ಕಾಚಾರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?