ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ ಮಾಫಿಯಾ ಹೆಚ್ಚಾಗಿದ್ದು, ಇಂದು ಮಂಗಳೂರು ಪೊಲೀಸರು ಡ್ರಗ್ ಪೆಡ್ಲರ್ಸ್ಗಳನ್ನು ಬಂಧಿಸಿದ್ದಾರೆ.
Advertisement
ಮಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದು ಇಂದು ಓಮನ್ ದೇಶದ ಪ್ರಜೆ ಅಹಮ್ಮದ್ ಹಾಗೂ ಹಿಮಾಚಲ ಪ್ರದೇಶದ ರಾಮ್ ಎಂಬವನನ್ನು ಬಂಧಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ಗೋವಾಕ್ಕೆ ಬಂದಿದ್ದ ಅಹಮ್ಮದ್ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದು ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದ. ಈತನಿಗೆ ರಾಮ್ ಸಹ ಜೊತೆಯಾಗಿದ್ದು, ಇವರು ಮಾದಕ ದ್ರವ್ಯದ ಚಟದ ದಾಸರಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಲಾಡ್ಜ್ಗೆ ದಾಳಿ ನಡೆಸಿದ ಮಂಗಳೂರು ಉತ್ತರ ಠಾಣಾ ಪೊಲೀಸರು 51 ಗ್ರಾಂ ಗಾಂಜಾ, 2 ಗ್ರಾಂ ಎಂ.ಡಿ.ಎಂ.ಎ ಸಹಿತ ಈ ವ್ಯಸನಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಅಕ್ರಮ ಬಾಂಗ್ಲಾ ವಲಸಿಗರ ವಿರುದ್ದ ಕ್ರಮ: ಬಿಎಸ್ ವೈ
Advertisement
Advertisement
ಓಮನ್ ದೇಶದ ಪ್ರಜೆ ಅಹಮ್ಮದ್ ಪಾಸ್ ಪೋರ್ಟ್ ವ್ಯಾಲಿಡಿಟಿ ಮುಗಿದಿದ್ದರೂ, ಅನಧಿಕೃತವಾಗಿ ಇಲ್ಲಿ ತಂಗಿದ್ದರಿಂದ ಎನ್.ಡಿ.ಪಿ.ಎಸ್ ಕೇಸ್ ಜೊತೆ ಪಾಸ್ ಪೋರ್ಟ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲರ್ಸ್ ಹಾವಳಿ ಹೆಚ್ಚಾಗಿದ್ದು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿ ಪೆಡ್ಲರ್ಸ್ಗಳನ್ನು ಹೆಡೆಮುರಿಕಟ್ಟುತ್ತಿದ್ದಾರೆ. ಇದನ್ನೂ ಓದಿ: ತೆಂಕಪೇಟೆಯಲ್ಲೊಬ್ಬ ಮ್ಯಾಗ್ನೆಟ್ ಮ್ಯಾನ್