– ಮಂಗಳೂರು – ಮೈಸೂರು ಅಲಯನ್ಸ್ ಏರ್ ವಿಮಾನ ಸೇವೆ ಆರಂಭ
ಮಂಗಳೂರು: ಮಂಗಳೂರು – ಮೈಸೂರು ನಡುವಿನ ವಿಮಾನಯಾನ ಇಂದು ಆರಂಭವಾಗಿದೆ. ಮೈಸೂರಿನಿಂದ ಅಲಯನ್ಸ್ ಏರ್ನ ಮೊದಲ ವಿಮಾನ ಶುಕ್ರವಾರ ಮಂಗಳೂರು ಏರ್ಪೋರ್ಟ್ಗೆ ಬಂದಿಳಿಯಿತು.
Advertisement
ಅಲಯನ್ಸ್ ಏರ್ನ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ವಾಟರ್ ಸೆಲ್ಯೂಟ್ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ವಿ.ವಿ.ರಾವ್, ಅದಾನಿ ಸಂಸ್ಥೆಯ ಅಧಿಕಾರಿಗಳು ಹಾಜರಿದ್ದರು.
Advertisement
Advertisement
ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಲಭ್ಯವಾಗಲಿದೆ.
Advertisement
ಮೈಸೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ವಿಮಾನ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಖ ಆರ್. ಮಂಜುನಾಥ್ ಅವರು, ಹಲವು ತಿಂಗಳ ಹಿಂದೆಯೇ ಈ ಸೇವೆ ಆರಂಭಿಸಲು ಬೇಡಿಕೆ ಇತ್ತು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸೇವೆ ಆರಂಭವಾಗಿರಲಿಲ್ಲ. ಈಗ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಆರಂಭವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಈ ವಿಮಾನ ಸೇವೆಯ ಸವಿನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.
ಮಂಗಳೂರು- ಮೈಸೂರು ನಡುವೆ 255 ಕಿ.ಮೀ ದೂರವಿದ್ದು, ಬಸ್ ಮೂಲಕ ಸಂಚಾರಕ್ಕೆ ಸುಮಾರು ಆರರಿಂದ ಏಳು ಗಂಟೆ ಕಾಲ ಬೇಕಾಗುತ್ತದೆ. ಕಾರಲ್ಲಿ ಸಂಚರಿಸುವುದಿದ್ದರೂ 5 ಗಂಟೆ ಬೇಕಾಗುತ್ತದೆ.
ಆದರೆ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಬಂದರು ನಗರಿ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರನ್ನು ತಲುಪಬಹುದಾಗಿದೆ. 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30 ಕ್ಕೆ ತಲುಪಿದೆ. ಅದೇ ವಿಮಾನ 12.55ಕ್ಕೆ ಹೊರಟು ಮಧ್ಯಾಹ್ನ 1.55ಕ್ಕೆಮೈಸೂರು ತಲುಪಲಿದೆ.