ಮಂಗಳೂರು: ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೂ ಉಗ್ರ ಸಂಘಟನೆಗಳಿಗೂ ಲಿಂಕ್ ಇದ್ಯಾ ಎನ್ನುವ ಶಂಕೆ ವ್ಯಕ್ತವಾಗಿದೆ.
ಕಳೆದ ನವೆಂಬರ್ 27 ರಂದು ಮಂಗಳೂರಿನ ಬಿಜೈ ಹಾಗೂ ನ.30 ರಂದು ಕೋರ್ಟ್ ರಸ್ತೆಯಲ್ಲಿ ಗೋಡೆ ಬರಹ ಪತ್ತೆಯಾಗಿತ್ತು. ಈ ಬರಹದಲ್ಲಿ ಲಷ್ಕರ್ ಉಗ್ರರ ಪರವಾಗಿ ಹಾಗೂ ಮುಸ್ಲಿಂ ಧರ್ಮದ ಪರವಾಗಿ ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಪೊಲೀಸರ ತನಿಖಾ ತಂಡ 4 ವಿವಿಧ ತಂಡಗಳಿಂದ ಹಲವು ಆಯಾಮದಲ್ಲಿ ತನಿಖೆ ಆರಂಭಿಸಿತ್ತು.
Advertisement
Advertisement
ಈ ಪ್ರಕರಣದ ತನಿಖೆಯಲ್ಲಿರುವ ಪೊಲೀಸರ ತಂಡ ಅನುಮಾನದ ಮೇಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಆಹ್ಮದ್(21) ಬಂಧಿಸಿ ತನಿಖೆ ನಡೆಸುತ್ತಿತ್ತು. ಇದನ್ನು ಓದಿ:ಮಂಗಳೂರಿನಲ್ಲಿ ಗೋಡೆ ಬರಹ-ಮತ್ತಿಬ್ಬರ ಬಂಧನ
Advertisement
ಬಂಧಿತರು ಸ್ಥಳೀಯ ಯಾವುದೇ ಸಂಘಟನೆಗಳ ಜೊತೆ ಗುರುತಿಸಿಕೊಂಡಿಲ್ಲ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂ.ಟೆಕ್ ಮಾಡುತ್ತಿದ್ದ ಮುನೀರ್ ಆರ್ಯಸಮಾಜ ರಸ್ತೆಯ ಪ್ರೆಸಿಡೆನ್ಸಿ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದನು. ಲಾಕ್ ಡೌನ್ ಮಂಗಳೂರಿನಲ್ಲಿ ತಿರುಗಾಡಲು ಝೋಮ್ಯಾಟೋ ಸೇರಿದ್ದನು
Advertisement
ಆಗಾಗ ಮಂಗಳೂರಿಗೆ ಮಹಮ್ಮದ್ ಶಾರೀಕ್ ಬರುತ್ತಿದ್ದನು. ಈ ಇಬ್ಬರಿಗೂ ಉಗ್ರ ಸಂಘಟನೆಗಳೊಂದಿಗೆ ಟಚ್ ಇರುವವರ ಜೊತೆ ಸಂಪರ್ಕ ಇರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಸಿಕ್ಕ ವಿವಿಧ ಸಾಕ್ಷಗಳಲ್ಲಿ ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಹಿನ್ನೆಲೆ ಅವರ ಸಂಪರ್ಕ ಹಾಗೂ ಬರಹದ ಉದ್ದೇಶ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.