ಮಂಗಳೂರು: ಯೆನೆಪೋಯ (ಡಿಮ್ಡ್ ಟು ಬಿ ಯುವರ್ಸಿಟಿ)ಯ, ದಿ ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಅಸಿಸ್ಟೆಂಟ್ ಪ್ರೋಫೆಸರ್ ಹಾಗೂ ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಎಗ್ಸಾಮಿನೇಶನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೀವನ್ ರಾಜ್ ಹಂಪಿ ವಿಶ್ವ ವಿದ್ಯಾನಿಲಯದಿಂದ “ಹೊಸ ಆರ್ಥಿಕ ನೀತಿ ಮತ್ತು ಶೈಕ್ಷಣಿಕ ವಲಯ: ದಕ್ಷಿಣ ಕನ್ನಡ ಜಿಲ್ಲೆಯನ್ನು ಅನುಲಕ್ಷಿಸಿ ಒಂದು ಅಧ್ಯಯನ”. (New Economic Policy and Education Sector: A study with Reference to Dakshina Kannada District) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಪ್ರಾಧ್ಯಾಪಕರಾಗಿ 11 ವರ್ಷಗಳ ಅನುಭವವುಳ್ಳ ಇವರು ಹಿಂದೆ ಸಂತ ಅಲೋಶಿಯಸ್ ಮತ್ತು ಕಣಚೂರು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಇವರು ಎಂ.ಕಾಂ ಪದವಿಯನ್ನು ಸೈಂಟ್ ಅಲೋಶಿಯಸ್ ಕಾಲೇಜ್ ನಲ್ಲಿ ಪಡೆದಿದ್ದಾರೆ. ಮಾತ್ರವಲ್ಲದೆ ಯೆನೆಪೋಯ ವಿವಿಯ “ಉತ್ತಮ ಶಿಕ್ಷಕ -2019” ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
Advertisement
Advertisement
ಸರ್ಕಾರಿ ಶಾಲೆ ಉಳಿಸಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಅನೇಕ ಸಾಮಾಜಿಕ ಮತ್ತು ಸಾಹಿತ್ಯ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಸೌಹಾರ್ದ ಕಲಾವಿದರು ಕುತ್ತಾರ್ ಇಲ್ಲಿ ಸಾಂಸ್ಕೃತಿಕ ಚಟುವಟಿಕೆ ಆರಂಭಿಸಿದ ಅವರು, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲದೆ ಮುನ್ನೂರು ಗ್ರಾಮದ ಹೆಸರಾಂತ ಸಂಸ್ಥೆ ಹನುಮಾನ್ ಕ್ರೀಡಾಮಂಡಳಿಯ ಸದಸ್ಯರು ಆಗಿದ್ದಾರೆ.
Advertisement
ಸದ್ಯ ಅಭಿಮತ ಮಂಗಳೂರು ಇದರ ಮುಖ್ಯ ಸಂಘಟಕರಾಗಿರುವ ಜೀವನ್ ರಾಜ್ ಕುತ್ತಾರ್ ಸಾಹಿತ್ಯ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಜನರಿಗಾಗಿ ಸಾಹಿತ್ಯ ಎಂಬ ನಿಲುವಿನೊಂದಿಗೆ ನಡೆಯುತ್ತಿರುವ “ಜನನುಡಿ” ಸಂಘಟಕರಲ್ಲಿ ಜೀವನ್ ರಾಜ್ ಕೂಡಾ ಒಬ್ಬರು. ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಜೀವನ್ ರಾಜ್, ಹಂಪಿ ವಿವಿಯಿಂದ ಪಿಎಚ್ಡಿ ಪದವಿ ಪಡೆದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕ್ಷೇತ್ರದ ಹಲವರು ಅಭಿನಂದಿಸಿದ್ದಾರೆ.