ನವದೆಹಲಿ: ಮಂಗಳವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಪ್ರಧಾನಿ ಮಂತ್ರಿಗಳ ಕಚೇರಿ ಟ್ವೀಟ್ ಮೂಲಕ ಖಚಿತಪಡಿಸಿದೆ.
ಮಂಗಳವಾರ ಅನ್ಲಾಕ್-1 ಅಂತ್ಯವಾಗಲಿದ್ದು, ಬುಧವಾರ ಅನ್ಲಾಕ್-2 ಆರಂಭವಾಗಲಿದೆ. ಈಗಾಗಲೇ ಆನ್ಲಾಕ್-2 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರಧಾನಿಗಳು ನಾಳೆಯೇ ಭಾಷಣದಲ್ಲಿ ಅನ್ಲಾಕ್-2 ಮತ್ತು ಕೊರೊನಾ ಪರಿಸ್ಥಿತಿಯ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ.
Advertisement
Prime Minister @narendramodi will address the nation at 4 PM tomorrow.
— PMO India (@PMOIndia) June 29, 2020
Advertisement
ಈಗಾಗಲೇ ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗಾಗಿ ನಾಳೆಯ ಭಾಷಣ ಕುತೂಹಲ ಹೆಚ್ಚಿಸಿದೆ.
Advertisement
ಜುಲೈ 31ರವರೆಗೆ ಶಾಲಾ, ಕಾಲೇಜುಗಳು ಇಲ್ಲ -ಅನ್ಲಾಕ್ 2 ಮಾರ್ಗಸೂಚಿ ಪ್ರಕಟ, ಅನ್ಲಾಕ್ 1ಗಿಂತ ಭಿನ್ನವಾಗಿಲ್ಲhttps://t.co/wwqMsh7owT#Unlock2 #CoronaVirus #COVID19 #Schools #College
— PublicTV (@publictvnews) June 29, 2020