ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರವರ ಆಪ್ತ ಸಹಾಯಕನನ್ನು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ಅಪರಾಧದಲ್ಲಿ ಬಂಧಿಸಿ ನಂತರ ಮುಖ್ಯಮಂತ್ರಿಗಳ ಒತ್ತಡದಿಂದ ಆರೋಪಿಯನ್ನು ಗೃಹ ಇಲಾಖೆಯ ಬಿಡುಗಡೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಸಿಸಿಬಿ ಕಚೇರಿ ಎದುರು ಪ್ರತಿಭಟನೆ ಮಾಡಿದೆ.
Advertisement
ಮುಖ್ಯಮಂತ್ರಿಗಳು ಹಾಗೂ ಪ್ರಭಾವಿ ಮಂತ್ರಿಗಳು ತಮ್ಮ ಸ್ವೇಚ್ಛಾಚಾರಕ್ಕೆ ಗೃಹ ಇಲಾಖೆಯನ್ನು ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಸಿಸಿಬಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು.
Advertisement
Advertisement
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು ಮಾತನಾಡಿ, ರಾಜ್ಯದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಸ್ಥರಿಗೆ ಒಂದು ನ್ಯಾಯ. ಭ್ರಷ್ಟರನ್ನು ಬಂಧಿಸಬೇಕಾದ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡು ಸಾಂವಿಧಾನಿಕವಾಗಿ ಪ್ರತಿಭಟನೆ ಮಾಡುವ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು.
Advertisement
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಅವರು ಮಾತನಾಡಿ, ಆರೋಪಿ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಮರು ಬಂಧನ ಆಗಲೇಬೇಕು, ಇದರ ಜೊತೆಗೆ ಮುಖ್ಯಮಂತ್ರಿಗಳ ಮಗ ವಿಜಯೇಂದ್ರರವರ ವಿಚಾರಣೆಯು ಸಹ ಮಾಡಬೇಕು. ನಾವು ಶಾಂತಿಯುತವಾದ ಪ್ರತಿಭಟನೆಯ ಮೂಲಕ ಅಗ್ರಹಿಸಿದರೆ ರಾಜ್ಯ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸಿ ನಾಚಿಕೆ ಬಿಟ್ಟು ಪ್ರತಿಭಟನಾಕಾರರನ್ನು ಬಂಧಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ : ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್
ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಗಳ ಮೂಲಕವೂ ಸಹ ಪ್ರಭಾವಿಗಳ ಅಕ್ರಮಗಳು ಹೊರಬರಬೇಕಿದೆ. ಈ ರೀತಿಯ ಬೃಹತ್ ಹಗರಣವನ್ನು ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ. ಈ ಹಗರಣವದ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಟಿ ನಾಗಣ್ಣ ಆಗ್ರಹಿಸಿದರು.
ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿ ಇರುವ ಸಿಸಿಬಿ (ಕೇಂದ್ರ ಅಪರಾಧ ದಳ) ಕಚೇರಿಯ ಎದುರು ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ , ಉಷಾ ಮೋಹನ್, ಪ್ರಕಾಶ್ ನಾಗರಾಜ್, ಶಿಲ್ಪ ಬಿ, ಗೋಪಿನಾಥ್ ಮೊದಲಾದ ಮುಖಂಡರ ಜೊತೆಗೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರನ್ನು ಈ ಸಂದರ್ಭದಲ್ಲಿ ಬಂಧಿಸಲಾಯಿತು.