ಅಯೋಧ್ಯೆ: ರಾಮಮಂದಿರ ಭೂಮಿ ಪೂಜೆಗೆ ಆಗಮಿಸಿದ ಮೋದಿ ಆರಂಭದಲ್ಲಿ ಹನುಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬೆಳಗ್ಗೆ 9:30ಕ್ಕೆ ದೆಹಲಿಯಿಂದ ವಾಯು ಸೇನೆಯ ವಿಮಾನದಲ್ಲಿ ಹೊರಟ ಮೋದಿ 10:25ಕ್ಕೆ ಲಕ್ನೋ ತಲುಪಿದರು. ಬಳಿಕ ಹೆಲಿಕಾಪ್ಟರ್ ಸಾಕೇತ್ ಕಾಲೇಜ್ನ ಹೆಲಿಪ್ಯಾಡ್ನಲ್ಲಿ 11:35ಕ್ಕೆ ಲ್ಯಾಂಡ್ ಆದರು.
Advertisement
#WATCH Prime Minister Narendra Modi offers prayers at Hanuman Garhi Temple in #Ayodhya ahead of ‘Bhoomi Pujan’ of #RamTemple pic.twitter.com/yq2XsUlGKo
— ANI (@ANI) August 5, 2020
Advertisement
ಹೆಲಿಪ್ಯಾಡ್ನಿಂದ ನೇರವಾಗಿ ಹನುಮಂತ ದೇವಾಲಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಜೊತೆ ಆಗಮಿಸಿದರು. ಮಾಸ್ಕ್ ಧರಿಸಿ ಅರತಿ ಎತ್ತಿದ ಮೋದಿಗೆ ಬೆಳ್ಳಿಯ ಕೀರಿಟ, ರಾಮನಾಮ ಇರುವ ಶಾಲನ್ನು ಹೊದಿಸಿ ಗೌರವಿಸಲಾಯಿತು. ಪೂಜೆಯಲ್ಲಿ ಭಾಗಿಯಾದ ಬಳಿಕ ನೇರವಾಗಿ ಆಯೋಧ್ಯೆ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ತೆರಳಿದರು.
Advertisement
#WATCH: Prime Minister Narendra Modi presented with a headgear, silver 'mukut' and stole by Sri Gaddinsheen Premdas Maharaj, head priest of 10th-century Hanuman Garhi Temple.#Ayodhya #RamTemple pic.twitter.com/EOgqrz9hi1
— ANI (@ANI) August 5, 2020
Advertisement
ಹನುಮಂತ ಇಲ್ಲದೇ ರಾಮನ ಯಾವುದೇ ಕೆಲಸ ಆರಂಭಗೊಳ್ಳುವುದಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಮೊದಲು ಹನುಮಂತನ ಪೂಜೆ ಮಾಡಿ ಆಶೀರ್ವಾದ ಪಡೆದ ಬಳಿಕ ರಾಮ ದೇವಸ್ಥಾನದ ಭೂಮಿ ಪೂಜೆಗೆ ಕಾರಿನಲ್ಲಿ ತೆರಳಿದರು.