– ಭಯದಲ್ಲಿ ಪೋಷಕರು
ಮಡಿಕೇರಿ: 2019ರಲ್ಲಿ ಭೂಕುಸಿರತವಾದ ಸ್ಥಳದಲ್ಲಿ ವಿದ್ಯಾರ್ಥಿಗಳು ನೆಟ್ವರ್ಕ್ ಹುಡುಕಾಟ ನಡೆಸುತ್ತಿರೋದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಭೂಮಿ ಶಿಥಿಲವಾಗಿದ್ದು, ಮಕ್ಕಳು ನೆಟ್ವರ್ಕ್ ಮರದ ಮೇಲೆ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಗ್ರಾಮೀಣಾ ಭಾಗದಲ್ಲಿ ನೆಟ್ವರ್ಕ್ ಮತ್ತು ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಅನ್ಲೈನ್ ಕಲಿಕೆಗೆ ತೊಡಕು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಕಷ್ಟವಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೂ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ನೆಟ್ವರ್ಕ್ ಗಾಗಿ ಮೂರು ನಾಲ್ಕು ಕಿಲೋ ಮೀಟರ್ ನಡೆದುಕೊಂಡು ಬಂದು ನೆಟ್ವರ್ಕ್ ಸರ್ಚ್ ಮಾಡಿ ಅನ್ಲೈನ್ ಕ್ಲಾಸ್ ಗೆ ಹಾಜರಾಗುವ ಪರಿಸ್ಥಿತಿ ಇದೆ. ಇದನ್ನೂ ಓದಿ: ನೆಟ್ವರ್ಕ್ ಗಾಗಿ ಅಟ್ಟಣಿಗೆ ಕ್ಲಾಸ್ ರೂಂ ನಿರ್ಮಿಸಿದ ಪಬ್ಲಿಕ್ ಹೀರೋ ಶಿಕ್ಷಕ ಸತೀಶ್
Advertisement
Advertisement
ಮಳೆಗಾಲ ಅರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಬೇರೆ ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಬೆಟ್ಟ ಗುಡ್ಡದ ಮೇಲೆ ನೆಟ್ವರ್ಕ್ ಗಾಗಿ ಮರ ಬಂಡೆ ಬೆಟ್ಟದ ತುದಿಯಲ್ಲಿ ಹೋಗಿ ಅನ್ಲೈನ್ ಶಿಕ್ಷಣಕ್ಕೆ ಮುಂದಾಗಿದ್ದಾರೆ. ಈ ಗ್ರಾಮದ ಸಮೀಪ ಇರುವ ತೋರಾ ಗ್ರಾಮದಲ್ಲಿ 2019ರಲ್ಲಿ ಭೂಕುಸಿತ ಉಂಟಾಗಿ ಸಾವು ನೋವುಗಳು ಸಂಭವಿಸಿತ್ತು. ಇದೀಗ ಮಕ್ಕಳು ಬೆಟ್ಟದ ಮೇಲೆ ನೆಟ್ವರ್ಕ್ ಗಾಗಿ ಅಲೆದಾಟ ನಡೆಸುತ್ತಿದ್ದು. ಪೋಷಕರಲ್ಲಿ ಅತಂಕ ಮನೆ ಮಾಡುತ್ತಿದೆ. ಹೀಗಾಗಿ ಗ್ರಾಮಕ್ಕೆ ನೆಟ್ವರ್ಕ್ ಸಮಸ್ಯೆ ಬಗ್ಗೆ ಹರಿಸಿಕೊಂಡುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಅಗ್ರಹಿಸಿದ್ದಾರೆ. ಇದನ್ನೂ ಓದಿ: ಆನ್ಲೈನ್ ಕ್ಲಾಸ್ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು