– ಕೊನೆಯವರೆಗೂ ಬ್ಯಾಟ್ ಮಾಡಿ ಮಣಿದ ಮಹಿ
ದುಬೈ: ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ಮ್ಯಾಜಿಕ್ ಸ್ಪಿನ್ನರ್ ರಶೀದ್ ಖಾನ್ ಅವರ ಉತ್ತಮ ಬೌಲಿಂಗ್ನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-2020ಯ 14ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಚೆನ್ನೈ ತಂಡದ ಸೋಲಿನ ಓಟ ಮುಂದುವರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಮತ್ತು ಪ್ರಿಯಮ್ ಗಾರ್ಗ್ ಅವರ ಭರ್ಜರಿ ಜೊತೆಯಾಟದಿಂದ ನಿಗದಿತ 20 ಓವರಿನಲ್ಲಿ 165 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಆದರೆ ಕೊನೆಯವರಿಗೂ ಇದ್ದು ಬ್ಯಾಟ್ ಮಾಡಿದ ಧೋನಿಯವರು ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ನಿಗದಿತ 20 ಓವರಿನಲ್ಲಿ ಚೆನ್ನೈ 157 ರನ್ ಹೊಡೆದು ಕೇವಲ 7 ರನ್ ಅಂತರದಲ್ಲಿ ಸೋಲುಂಡಿತು.
Advertisement
Another big wicket for #SRH as Kedar Jadhav departs without adding much to the tally of runs.
Abdul Samad strikes. #CSK 4 down.#Dream11IPL #CSKvSRH pic.twitter.com/o4dDYNgGJ4
— IndianPremierLeague (@IPL) October 2, 2020
Advertisement
ಈ ವೇಳೆ ಸನ್ರೈಸರ್ಸ್ ಪರವಾಗಿ ಉತ್ತಮವಾಗಿ ಬೌಲ್ ಮಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಗಾಯದ ನಡುವೆಯೂ ಮೂರು ಓವರ್ ಬೌಲ್ ಮಾಡಿ ಒಂದು ವಿಕೆಟ್ ಕಿತ್ತು ಕೇವಲ 20 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ನಟರಾಜನ್ ಅವರು 2 ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಉತ್ತಮವಾಗಿ ಬೌಲ್ ಮಾಡಿದ ರಶೀದ್ ಖಾನ್ ಯಾವುದೇ ವಿಕೆಟ್ ಪಡೆಯದೇ ಇದ್ದರೂ ನಾಲ್ಕು ಓವರಿನಲ್ಲಿ ಕೇವಲ 12 ರನ್ ನೀಡಿ ಪಂದ್ಯಕ್ಕೆ ತಿರುವು ನೀಡಿದರು.
Advertisement
T Natarajan comes into the attack and strikes immediately.
Rayudu gets clean bowled!
Live – https://t.co/J1jCJPE40f #Dream11IPL #CSKvSRH pic.twitter.com/hHfsZn8Oq7
— IndianPremierLeague (@IPL) October 2, 2020
Advertisement
ಆರಂಭದಿಂದಲೇ ಆಕ್ರಮಣಕಾರಿ ಬೌಲಿಂಗ್ಗೆ ಮುಂದಾದ ಹೈದರಾಬಾದ್ ತಂಡ ಚೆನ್ನೈ ಆರಂಭಿಕ ಆಘಾತ ನೀಡಿತು. 2ನೇ ಓವರಿನ ಮೂರನೇ ಬಾಲಿನಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಶೇನ್ ವ್ಯಾಟ್ಸನ್ ಅವರು ಬೌಲ್ಡ್ ಆದರು. ನಂತರ ಬಂದ ಅಂಬಾಟಿ ರಾಯುಡು ಅವರು 5ನೇ ಓವರಿನಲ್ಲಿ ನಟರಾಜನ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಕ್ವಿಕ್ ರನ್ ಪಡೆಯಲು ಹೋದ ಫಾಫ್ ಡು ಪ್ಲೆಸಿಸ್ ಅವರು 22 ರನ್ ಗಳಿಸಿ ಔಟ್ ಆಗಿ ಪೆವಿಲಯನ್ ಸೇರಿದರು.
Bhuvi too good for Watson in the chase.#CSK lose their first.
Live – https://t.co/J1jCJPE40f #Dream11IPL #CSKvSRH pic.twitter.com/kppdlYg1up
— IndianPremierLeague (@IPL) October 2, 2020
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಅವರನ್ನು ಸಮರ್ಥಿಸಿಕೊಳ್ಳುವಂತೆ ಸನ್ರೈಸರ್ಸ್ ತಂಡದ ಬೌಲರ್ ಗಳು ಬೌಲ್ ಮಾಡಿದರು. ರೈಸರ್ಸ್ ವೇಗಿಗ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಆಟಗಾರರು ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು ಕೇವಲ 36 ರನ್ ಪೇರಿಸಿದರು. ನಂತರ ಅಬ್ದುಲ್ ಸಮದ್ ಅವರ ಸ್ಪಿನ್ ಮೋಡಿಗೆ ಬಲಿಯಾದ ಕೇದಾರ್ ಜಾಧವ್ ಅವರು ಕೇವಲ ಮೂರು ರನ್ ಸಿಡಿಸಿ ಹೊರನಡೆದರು.
Jadeja gets to his maiden IPL FIFTY and departs straight after.
Live – https://t.co/J1jCJPE40f #Dream11IPL #CSKvSRH pic.twitter.com/ZZVbwFFKNu
— IndianPremierLeague (@IPL) October 2, 2020
ಇನ್ನಿಂಗ್ಸ್ ಉದ್ದಕ್ಕೂ ಹೈದರಾಬಾದ್ ತಂಡ ಎಲ್ಲಿಯೂ ರನ್ ಬಿಟ್ಟುಕೊಡಲಿಲ್ಲ. ಪರಿಣಾಮ ಧೋನಿ ಮತ್ತು ಜಡೇಜಾ ಕ್ರೀಸಿನಲ್ಲಿದ್ದರು ಕೂಡ 13 ಓವರ್ ಮುಕ್ತಾಯಕ್ಕೆ ಚೆನ್ನೈ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಕೇವಲ 61 ರನ್ ಪೇರಿಸಿತು. ಈ ವೇಳೆ ತಾಳ್ಮೆಯ ಆಟಕ್ಕೆ ಮುಂದಾದ ಧೋನಿ ಮತ್ತು ಜಡೇಜಾ 56 ಎಸೆತಗಳಲ್ಲಿ 71 ರನ್ಗಳ ಜೊತೆಯಾಟವಾಡಿದರು. 34 ಎಸೆತದಲ್ಲಿ ಶತಕ ಸಿಡಿದಿದ ಜಡೇಜಾ ನಟರಾಜನ್ ಅವರ 17ನೇ ಓವರನಲ್ಲಿ ಔಟ್ ಆದರು.