– ಜನಜಂಗುಳಿ ಮಾರುಕಟ್ಟೆಯಲ್ಲಿ ಕಳ್ಳಿಯರ ಕೈಚಳಕ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆರು ಮಹಿಳೆಯರ ಗ್ಯಾಂಗ್ ಕಾಣಿಸಿಕೊಂಡಿದ್ದು, ಕಳ್ಳಿಯರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಿಕ್ಷೆ ಬೇಡುವ ನೆಪದಲ್ಲಿ ಬರುವ ಮಹಿಳೆಯರು ಜನರ ಗಮನ ಬೇರಡೆ ಸೆಳೆದು ಕೌಂಟರ್ ನಲ್ಲಿರುವ ಹಣವನ್ನು ಕದ್ದು, ಜನಜಂಗುಳಿಯ ಮಾರುಕಟ್ಟೆಗಳಲ್ಲಿ ಮಿಂಚಿನಂತೆ ಮರೆ ಆಗ್ತಾರೆ.
ಬೆಂಗಳೂರಿನ ಎಪಿಎಂಸಿಗೆ ಕಾಲಿಟ್ಟ ಈ ತಂಡ ಕ್ಷಣಾರ್ಧದಲ್ಲಿ ಹಣ ಕದ್ದು ಎಸ್ಕೇಪ್ ಆಗಿದೆ. ಫೆಬ್ರವರಿ 23ರಂದು ಎಪಿಎಂಸಿಯಲ್ಲಿರುವ ಅಂಗಡಿಗೆ ಮಹಿಳೆಯರ ಗ್ಯಾಂಗ್ ಲಗ್ಗೆ ಇಟ್ಟಿದೆ. ಕೆಲವರು ಭಿಕ್ಷೆ ನೀಡುವಂತೆ ಕ್ಯಾಶ್ ಕೌಂಟರ್ ಬಳಿ ಬಂದು ನಿಂತಿದ್ದಾರೆ. ಈ ವೇಳೆ ಮಾಲೀಕ ಮಹಿಳೆಯನ್ನ ಅಂಗಡಿಯಿಂದ ಹೊರ ಕಳುಹಿಸಿಸಲು ಗಲ್ಲಾ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾರೆ. ಅಷ್ಟರಲ್ಲಿಯೇ ಮಹಿಳೆ ನಿಧಾನಕ್ಕೆ ಕ್ಯಾಶ್ ಕೌಂಟರ್ ಬಳಿ ಬಂದು ಹಣದ ಕಟ್ಟು ಎತ್ತಿ ಎಸ್ಕೇಪ್ ಆಗಿದ್ದಾಳೆ.
Advertisement
ಮಹಿಳೆಯರನ್ನ ಹೊರಗೆ ಕಳುಹಿಸಿ ಗಲ್ಲಾಪೆಟ್ಟಿಗೆ ಬಳಿ ಬಂದಾಗ ವ್ಯಕ್ತಿಗೆ ಹಣ ಕಳ್ಳತನ ಆಗಿರೋದು ಗಮನಕ್ಕೆ ಬಂದಿದೆ. ಕೂಡಲೇ ಹೊರ ಹೋಗಿ ನೋಡಿದ್ರೆ ಲೇಡಿ ಗ್ಯಾಂಗ್ ಮಿಂಚಿನಂತೆ ಮರೆಯಾಗಿತ್ತು. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.