ಹುಬ್ಬಳ್ಳಿ: ಭಿಕ್ಷೆ ಬೇಡುವವರನ್ನು ಕಂಡರೆ ಮೂದಲಿಸುವವರೇ ಹೆಚ್ಚು. ಆದರೆ ಭಿಕ್ಷುಕನಿಗೆ ವಿದ್ಯಾರ್ಥಿಯೊಬ್ಬ ತೂಕದ ಯಂತ್ರ ಕೊಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಅಪರೂಪದ ಘಟನೆಯೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ನವನಗರದಲ್ಲಿ ಭಿಕ್ಷೆ ಬೇಡಿಕೊಂಡು ಅಲೆಯುತ್ತಿದ್ದ ಭೀಕ್ಷುಕನಿಗೆ ತೂಕದ ಯಂತ್ರ ನೀಡಿ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಮೂಲಕ ವಿದ್ಯಾರ್ಥಿ ಸುನೀಲ್ ಜಿಂಗಾನಿ ಸಮಾಜ ಕಾರ್ಯ ಮಾಡಿ ಸುದ್ದಿಯಾಗಿದ್ದಾರೆ.
Advertisement
Advertisement
ಶಿರಸಿ ಮೂಲದ ಗಂಗಾಧರಪ್ಪ ವಿಕಲಚೇತನಾಗಿದ್ದು, ಪ್ರತಿನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನು ಅರಿತ ಸುನೀಲ್ ಜಂಗಾನಿ ಭೀಕ್ಷುಕನಿಗೂ ಉದ್ಯೋಗ ಕಲ್ಪಿಸಿ, ಬದುಕು ಕಟ್ಟಿಕೊಳ್ಳಲು ಆಸೆರೆಯಾಗುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.
Advertisement
Advertisement
ಕಟಿಂಗ್ ಮಾಡಿಸಿ, ಎರಡು ಜೊತೆ ಹೊಸ ಬಟ್ಟೆ ಕೊಟ್ಟು, ಅವರಿಗೆ ಹೊಸ ರೂಪ ನೀಡಿದ್ದಾರೆ. ಅವರಿಗೆ ತೂಕದ ಯಂತ್ರ ಕೊಡಿಸಿ ಭಿಕ್ಷೆ ಬೇಡುವ ಬದಲು ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡಲು ತಿಳಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ದಾನಿಗಳು, ಸ್ವಹೃದಯರು ಪ್ರತಿದಿನ ನಿರ್ಗತಿಕರಿಗೆ, ಬಡವರಿಗೆ, ಭಿಕ್ಷುಕರಿಗೆ ಮತ್ತು ಬೀದಿ ನಾಯಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದರು. ಆದರೆ ಇಂತ ಬಡವರು ಹಾಗೂ ಭಿಕ್ಷುಕರಿಗೆ ನೆರವಾಗುವ ಕೆಲಸ ಮಾಡಲಿಲ್ಲ. ಆದರೆ ಇದುವರೆಗೂ ಯಾವುದೇ ಪ್ರಚಾರವಿಲ್ಲದೇ ಸುನೀಲ್ ಜಂಗಾನಿ ಎಲೆ ಮರೆಯ ಕಾಯಿಯಂತೆ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹೈವೇ ದರೋಡೆಕೋರರ ಹಾವಳಿಗೆ ಬೆಚ್ಚಿಬಿದ್ದ ಜನರು