ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಐಪಿಎಲ್ 2020ರ ಡೆಬ್ಯು ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಿಂಚಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ಪಡೆಯುತ್ತಿದ್ದಂತೆ ಚಹಲ್ ಭಾವಿ ಪತ್ನಿ ಧನಶ್ರೀ ಟಿವಿ ಎದುರೇ ಸಂತೋಷದಿಂದ ಕುಣಿದು ಡ್ಯಾನ್ಸ್ ಮಾಡಿದ್ದಾರೆ.
Advertisement
ಸನ್ರೈಸರ್ಸ್ ವಿರುದ್ಧ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲೂ ಮಿಂಚಿನ ಬೌಲಿಂಗ್ ದಾಳಿ ಮಾಡಿದ್ದ ಚಹಲ್ ಎರಡು ಎಸೆತಗಳಲ್ಲಿ ಎದುರಾಳಿ ತಂಡದ ಪ್ರಮುಖ 2 ವಿಕೆಟ್ಗಳನ್ನು ಉರುಳಿಸಿ ಪಂದ್ಯಕ್ಕೆ ತಿರುವು ನೀಡಿದ್ದರು. ಅವರ ಉತ್ತಮ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಇದನ್ನೂ ಓದಿ: ಸಿಎಸ್ಕೆಗೆ ಮೊದಲ ಸೋಲು – ಕ್ರೀಸ್ನಲ್ಲಿದ್ದೂ ಮೋಡಿ ಮಾಡದ ಧೋನಿ, ಡುʼಪ್ಲೆಸಿಸ್ ಅಬ್ಬರ ವ್ಯರ್ಥ
Advertisement
Advertisement
ಮನೆಯಲ್ಲಿಯೇ ಪಂದ್ಯವನ್ನು ಕುಳಿತು ವೀಕ್ಷಣೆ ಮಾಡುತ್ತಿದ್ದ ಚಹಲ್ ಭಾವಿ ಪತ್ನಿ ಧನಶ್ರೀ, ಟಿವಿ ಎದುರೇ ಸಂತೋಷದಿಂದ ಸಂಭ್ರಮಿಸಿದ್ರು. ಈ ಸಂದರ್ಭದ ವಿಡಿಯೋ, ಫೋಟೋಗಳನ್ನು ಧನಶ್ರೀ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣ ನನಗೆ ಬಹಳ ವಿಶೇಷ ಕ್ಷಣವಾಗಿದ್ದು, ನಿಮಗೆ ಯಾವಾಗಲೂ ನನ್ನ ಬೆಂಬಲ, ಪ್ರೀತಿ ಲಭಿಸುತ್ತೆ. ದಿನದ ಕೊನೆಯಲ್ಲಿ ಇದು ಒಂದು ಪಂದ್ಯ, ಕೊನೆ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಆದರೆ ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ಕಾರಣ ಮೊದಲ ಪಂದ್ಯ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಪ್ರೇಯಸಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಚಹಲ್, ಸೋ ಕ್ಯೂಟ್ ಲವ್. ಥ್ಯಾಂಕ್ಸ್ ಎಂದು ಹೇಳಿದ್ದಾರೆ.
Advertisement
ಅಂದಹಾಗೇ ಚಹಲ್ ಹಾಗೂ ಧನುಶ್ರೀ ಅವರ ನಿಶ್ಚಿತಾರ್ಥ ಎರಡು ಕುಟುಂಬಗಳ ಸಮ್ಮುಖದಲ್ಲಿ ಆಗಸ್ಟ್ 8 ರಂದು ನಡೆದಿತ್ತು. ಈ ವಿಚಾರವನ್ನು ಸ್ವತಃ ಚಹಲ್ ತಮ್ಮ ಇನ್ಸ್ಟಾದಲ್ಲಿ ಘೋಷಿಸಿದ್ದರು. ಧನಶ್ರೀ ವರ್ಮಾ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದಾರೆ. ಅಲ್ಲದೇ ಡಾಕ್ಟರ್, ಕೊರಿಯೋಗ್ರಾಫರ್, ಯೂಟ್ಯೂಬರ್ ಮತ್ತು ಧನಶ್ರೀ ವರ್ಮಾ ಕಂಪನಿಯ ಸ್ಥಾಪಕಿ ಎಂದು ಇನ್ಸ್ಟಾಗ್ರಾಂ ಧನಶ್ರೀ ಬರೆದುಕೊಂಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಭಾವಿ ಪತಿ ಚಹಲ್ ಆಡಿದ ಮೊದಲ ಪಂದ್ಯವನ್ನು ಧನಶ್ರೀ ವಿಕ್ಷೀಸಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ
ಉಳಿದಂತೆ ನಾಳೆ ಆರ್ಸಿಬಿ ತಂಡ ಕಿಂಗ್ಸ್ ಇಲೆವೆನ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಮಯಾಂಕ್ ಸ್ಫೋಟಕ ಆಟದ ನಡುವೆಯೂ ಕಿಂಗ್ಸ್ ಇಲೆವೆನ್ ತಂಡ ಗೆಲುವಿನೊಂದಿಗೆ ಕಮ್ಬ್ಯಾಕ್ ಮಾಡಲು ಸಿದ್ಧವಾಗುತ್ತಿದೆ. ಇತ್ತ ಟೂರ್ನಿಯನ್ನು ಆರ್ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.