ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ ಡ್ಯಾಮ್ಗಳು ಭರ್ತಿಯಾಗಿ ದಾವಣಗೆರೆಯ ಕೆಲವು ಕಡೆ ಅವಾಂತರ ಸೃಷ್ಟಿಯಾಗಿದೆ.
Advertisement
ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಾತ್ರಿ ಸುರಿದ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ದಾವಣಗೆರೆಯ ಪಕ್ಕದಲ್ಲಿರುವ ನಾಗರಕಟ್ಟೆ, ಕಾಡಜ್ಜಿ ಗ್ರಾಮಗಳಲ್ಲಿ ಜಮೀನುಗಳು ಮುಳಗಡೆಯಾಗಿದ್ದು, ಭತ್ತದ ಗದ್ದೆ, ಹಾಗೂ ಅಡಿಗೆ ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೆಇಬಿ ಸಬ್ ಸ್ಟೇಷನ್, ಕೃಷಿ ಕೇಂದ್ರಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಕೆಇಬಿ ಸಬ್ ಸ್ಟೇಷನ್ ನಲ್ಲಿ ಸಿಲುಕಿದ್ದ ಇಬ್ಬರು ಸಿಬ್ಬಂದಿಯನ್ನು ತಡರಾತ್ರಿ ಅಗ್ನಿ ಶಾಮಕ ಸಿಬ್ಬಂದಿಗಳು ಅಗ್ನಿಶಾಸಕ ಅಧಿಕಾರಿ ಬಸವಶರ್ಮ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಬಕ್ರೀದ್ ಹಬ್ಬ -ಸಮುದಾಯದ ಮುಖಂಡರ ಜೊತೆಗೆ ಪೊಲೀಸರ ಶಾಂತಿ ಸಭೆ
Advertisement
Advertisement
ರಾತ್ರಿಯಿಡಿ ಸುರಿದ ಮಳೆಗೆ ಬಹುತೇಕ ಜಮೀನುಗಳು ಜಲಾವೃತವಾಗಿದ್ದು, ರೈತರು ಬೆಳೆದ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆ ಕೊಳೆಯುವ ಹಂತಕ್ಕೆ ತಲುಪಿದೆ. ಸರ್ಕಾರಿ ಕಟ್ಟಡಗಳ ಅವೈಜ್ಞಾನಿಕ ಕಾಮಗಾರಿಯಿಂದ ಸರಿಯಾಗಿ ಚರಂಡಿ ವ್ಯವಸ್ಥೆ ಮಾಡದೆ ಸರಾಗವಾಗಿ ನೀರು ಹೋಗದೆ ಜಮೀನುಗಳೇಲ್ಲ ಕೆರೆಯಂತಾಗಿವೆ. ದಾವಣಗೆರೆಯ ಕಾಡಜ್ಜಿ ಗ್ರಾಮದಲ್ಲಿ ನೂರಾರು ಎಕರೆ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿದ್ದು, ಕೊಳೆಯುವ ಹಂತಕ್ಕೆ ತಲುಪಿದೆ. ಅಲ್ಲದೆ ಕೃಷಿ ತರಬೇತಿ ಕೇಂದ್ರ ಕೂಡ ಜಲಾವೃತವಾಗಿದ್ದು, ಕಚೇರಿಗಳಿಗೆ ನೀರು ನುಗ್ಗಿ ದಾಖಲೆಗಳು ಕೂಡ ಮಳೆ ನೀರಿನಿಂದ ಹಾನಿಯಾಗಿದೆ. ತಗ್ಗು ಪ್ರದೇಶಗಳಲ್ಲಿ ಕೃಷಿ ತರಬೇತಿ ಕೇಂದ್ರ ಹಾಗೂ ಕೆಇಬಿ ಸಬ್ ಸ್ಟೇಷನ್ ನಿರ್ಮಾಣ ಮಾಡಿರುವುದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ
Advertisement
ಬಹುತೇಕ ಕೆರೆ ಡ್ಯಾಮ್ಗಳು ಭರ್ತಿಯಾಗಿದ್ದು, ಜಗಳೂರಿನ ತುಪ್ಪದಹಳ್ಳಿ ಕೆರೆ, ಕಾಡಜ್ಜಿ ಕೆರೆ, ಹರಪ್ಪಹಳ್ಳಿಯ ಕಲ್ಲಹಳ್ಳಿ, ಕುರೇಮಾಗನಹಳ್ಳಿ, ಕೆಂಚಾಪುರ, ಸೇರಿದಂತೆ ಹಲವು ಕೆರೆ ಡ್ಯಾಮ್ಗಳು ಭರ್ತಿಯಾಗಿವೆ. ಒಂದೇ ದಿನದ ಮಳೆಗೆ ಹರಪ್ಪಹಳ್ಳಿಯ ಚಟ್ನಹಳ್ಳಿ ಕೆರೆ ಕೋಡಿ ಬಿದ್ದಿದೆ. ಅಲೂರು ಗ್ರಾಮದ ಬಳಿ ನೂರಾರು ಎಕರೆ ಮೆಕ್ಕೆಜೋಳ ಕೂಡ ಜಲಾವೃತವಾಗಿದ್ದು, ಬೆಳೆ ನಾಶವಾಗಿವ ಭೀತಿಯಲ್ಲಿ ರೈತರಿದ್ದಾರೆ. ಹರಪ್ಪನಹಳ್ಳಿಯ ಪಣಿಯಾಪುರ ಗ್ರಾಮದ ಕೆಂಚಪ್ಪ ರೈತನಿಗೆ ಸೇರಿದ ಮೇಕೆಗಳ ಶಡ್ ನಲ್ಲಿ ನೀರು ನುಗ್ಗಿ 9 ಮೇಕೆಗಳು ಸಾವನ್ನಪ್ಪಿದ್ದು, ಬಡ ರೈತ ಕಣ್ಣೀರು ಹಾಕುವಂತಾಗಿದೆ.