-ಮುಂದಿನ ಹತ್ತು ದಿನಗಳು ಹುಷಾರ್!
ನವದೆಹಲಿ: ಲಡಾಕ್ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗ್ತಿಲ್ಲ. ಮಾತುಕತೆ ನಡುವೆ ಯುದ್ಧ ಸಿದ್ದತೆಗಳು ನಡೆದಿದ್ದು ಗಾಲ್ವಾನ್ ಗಡಿಯಲ್ಲಿ ಕದನ ಕಾರ್ಮೋಡ ಕವಿದಿದೆ. ಡ್ರ್ಯಾಗನ್ ದೇಶ ದಾಳಿಯ ಆತಂಕ ನಡುವೆ ಈಗ ಭಾರತದಲ್ಲಿ ಚೀನಾ ಮತ್ತೊಂದು ಕೃತ್ಯ ಎಸೆಸಲು ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗುತ್ತಿದೆ.
Advertisement
ಜೂನ್ 15ರಂದು ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಮೇಲೆ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಎಲ್ಲೆಡೆ ಚೀನಾ ವಸ್ತುಗಳು ಮತ್ತು ಸಾಫ್ಟ್ ವೇರ್ ಮೊಬೈಲ್ ಆ್ಯಪ್ ಗಳನ್ನು ಬೈಕಾಟ್ ಮಾಡುವ ಮಾತುಗಳು ಕೇಳಿ ಬರ್ತಿದೆ. ಇದಕ್ಕಾಗಿ ಅಭಿಯಾನ ಆರಂಭವಾಗಿದ್ದು ಕೇಂದ್ರ ಸರ್ಕಾರದಿಂದ ಕಾಮನ್ ಮ್ಯಾನ್ವರೆಗೂ ಈ ಬಾರಿ ನಿಶ್ಚಿತ ನಿರ್ಧಾರ ಮಾಡಿದ್ದಾರೆ. ಭಾರತೀಯರ ಈ ದಿಟ್ಟ ನಿರ್ಧಾರದಿಂದ ಚೀನಾ ಸಾಫ್ಟ್ವೇರ್ ವಲಯ ತೀವ್ರ ಆಕ್ರೋಶಗೊಂಡಿದೆ. ಇದೇ ಸೇಡಿಟ್ಟುಕೊಂಡಿರುವ ಚೀನಾ ಹ್ಯಾಕರ್ಸ್ ಭಾರತೀಯ ವ್ಯವಹಾರಗಳನ್ನು ಟಾರ್ಗೇಟ್ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಬಿತ್ತರವಾಗಿವೆ.
Advertisement
Advertisement
ಎಚ್ಚರ ಎಚ್ಚರ: ಮುಂದಿನ ಹತ್ತು ದಿನಗಳಲ್ಲಿ ಭಾರತೀಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವ್ಯವಹಾರಗಳ ಮೇಲೆ ಹ್ಯಾಕರ್ಸ್ ಕಣ್ಣಿಟ್ಟಿದ್ದು ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸೂಕ್ಷ್ಮ ಡಾಟಾ ಕದಿಯುವುದು, ಸೇವೆಗಳಿಗೆ ತೊಡಕುಂಟು ಮಾಡುವ ಪ್ರಯತ್ನ ನಡೆಯಲಿದೆಯಂತೆ. ಇದಕ್ಕಾಗಿ ತಯಾರಿ ನಡೆಯುತ್ತಿದ್ದು ಈ ಸಂಬಂಧ ಡಾರ್ಕ್ ವೆಬ್ನಲ್ಲಿ ನಡೆದ ಸಂಭಾಷಣೆ ಬಹಿರಂಗವಾಗಿದೆ. ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಸೈಫಿರ್ಮಾ ಇಂತದೊಂದು ಎಚ್ಚರಿಕೆ ನೀಡಿದೆ. ಈ ಸಂಸ್ಥೆ ಪ್ರಕಾರ ದೂರಸಂಪರ್ಕ, ಫಾರ್ಮಾ, ಸ್ಮಾರ್ಟ್ಫೋನ್ ಮತ್ತು ನಿರ್ಮಾಣ ಉದ್ಯಮಗಳಲ್ಲಿ ಭಾರತೀಯ ಸರ್ಕಾರಿ ವೆಬ್ಸೈಟ್ಗಳು ಮತ್ತು ಕಾರ್ಪೊರೇಟ್ಗಳನ್ನು ಗುರಿಯಾಗಿಸುವ ದುರುದ್ದೇಶ ಹೊಂದಿದೆ ಎನ್ನಲಾಗಿದೆ.
Advertisement
ಅತಿ ಹೆಚ್ಚು ಚೀನಾ ಮೊಬೈಲ್: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ನಡೆಸಿದ ಸರ್ವೇ ಪ್ರಕಾರ, ಮಾರ್ಚ್ 2020ರ ಮೊದಲ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ 3.25 ಕೋಟಿ ಸ್ಮಾರ್ಟ್ ಫೋನ್ಗಳಲ್ಲಿ ಸುಮಾರು 76 ಪ್ರತಿಶತವು ಚೀನಾದ ಬ್ರಾಂಡ್ಗಳಾಗಿವೆ. ಅದೇ ಐಡಿಸಿ ದತ್ತಾಂಶವು ಭಾರತದ ಐದು ಉನ್ನತ ಸ್ಮಾರ್ಟ್ ಫೋನ್ ಬ್ರಾಂಡ್ಗಳಲ್ಲಿ ನಾಲ್ಕು ಚೀನಾದವು ಎಂದು ತೋರಿಸಿದೆ. ಚೀನಾದ ಬ್ರಾಂಡ್ ಶಿಯೋಮಿ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ವಿವೊ ಇದೆ. ಮೂರನೆಯ ಸ್ಥಾನದಲ್ಲಿ ಚೀನಾದ್ದು ಅಲ್ಲದ ಸ್ಯಾಮ್ಸಂಗ್ ಇದ್ದರೆ ನಂತರದ ಸ್ಥಾನದಲ್ಲಿ ಮತ್ತೆ ಚೀನಾದ ರಿಯಲ್ಮೆ ಮತ್ತು ಒಪ್ಪೊ ಸ್ಥಾನ ಪಡೆದಿವೆ. ಭಾರತ ತಂತ್ರಜ್ಞಾನದಲ್ಲಿ ಚೀನಾವನ್ನು ಹೆಚ್ಚು ಅವಲಂಬಿಸಿದ್ದು ಇದನ್ನೇ ಹ್ಯಾಕರ್ಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.