ಪರ್ತ್: ಭಾರತದಲ್ಲಿ ಮಾಡುತ್ತಿರುವ ಕೊರೊನಾ ಟೆಸ್ಟ್ಗಳು ವಿಶ್ವಾಸಾರ್ಹವಲ್ಲ ಎಂದು ಎಂದು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಮುಖ್ಯಮಂತ್ರಿ ಮಾರ್ಕ್ ಮೆಕ್ಗೋವನ್ ಹೇಳಿದ್ದಾರೆ.
ಭಾರತದಿಂದ ಮರಳಿ ಪರ್ತ್ ಹೋಟೆಲ್ಗಳಲ್ಲಿ ಕ್ವಾರಂಟೈನ್ನಲ್ಲಿರುವ ನಾಲ್ವರಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಮಾರ್ಕ್ ಅವರು ಈ ಹೇಳಿಕೆ ನೀಡಿದ್ದಾರೆ.
Advertisement
Advertisement
ಭಾರತದಿಂದ ಮರಳುತ್ತಿರುವ ವ್ಯಕ್ತಿಗಳಿಗೆ ಅಲ್ಲಿ ಸರಿಯಾಗಿ ಪರೀಕ್ಷೆ ಮಾಡುತ್ತಿಲ್ಲ. ಇದು ಇಲ್ಲಿ ಕೆಲ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಭಾರತದಿಂದ ವಾಪಸಾಗುತ್ತಿರುವ ಹೆಚ್ಚಿನವರು ಕೋವಿಡ್ ಸೋಂಕು ಹೊಂದಿದ್ದಾರೆ ಎಂದು ಪಶ್ಚಿಮ ಆಸ್ಟ್ರೇಲಿಯಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಭಾರತದಿಂದ ಸಿಡ್ನಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನದ ಓರ್ವ ಸಿಬ್ಬಂದಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪ್ರಯಾಣಕ್ಕೂ ಮುನ್ನ ದೆಹಲಿಯಲ್ಲಿ ಅವರಿಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ನೆಗೆಟಿವ್ ಬಂದಿತ್ತು. ಸಿಡ್ನಿಗೆ ಬಂದ ನಂತರ ಅಲ್ಲಿ ಟೆಸ್ಟ್ ಮಾಡಲಾಗಿದ್ದು ಅಲ್ಲಿ ಪಾಸಿಟಿವ್ ಬಂದಿದೆ. ಈ ಕಾರಣಕ್ಕೆ ಪ್ರಯಾಣಿಕರನ್ನು ಸಿಡ್ನಿಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಬಳಿಕ ವಿಮಾನವು ಪ್ರಯಾಣಿಕರಿಲ್ಲದೆಯೇ ಕೇವಲ ಸರಕು ಹೇರಿಕೊಂಡು ಭಾರತಕ್ಕೆ ಮರಳಿದೆ.
Advertisement
ಭಾರತದಲ್ಲಿ ಪ್ರತಿ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮೇ 15ರವರೆಗೆ ಎಲ್ಲ ನೇರ ವಿಮಾನಗಳನ್ನು ರದ್ದು ಮಾಡಿದೆ.