– ಡೌನ್ಲೋಡ್ ಲಿಂಕ್ ಲೈವ್
ನವದೆಹಲಿ: ಭಾರತದಲ್ಲಿ ಪಬ್ಜಿ ಮೊಬೈಲ್ ಗೇಮ್ ನೋಂದಣಿ ಆರಂಭಗೊಂಡಿದ್ದು, ಕೆಲ ಆಯ್ದ ಬಳಕೆದಾರರಿಗೆ ಲೈವ್ ಗೇಮ್ ಅವಕಾಶ ಸಹ ನೀಡಲಾಗಿದೆ.
ಕಂಪನಿ ಭಾರತದ ವೈಬ್ಸೈಟ್ ಪಬ್ಜಿ ಮೊಬೈಲ್ ಡೌನ್ಲೋಡ್ ಲಿಂಕ್ ಸಹ ಪ್ರಕಟಿಸಿದೆ. ಆದ್ರೆ ಸದ್ಯ ಲಿಂಕ್ ಆಕ್ಟಿವ್ ಆಗಿಲ್ಲ. ಗೂಗಲ್ ಪ್ಲೇಸ್ಟೋರ್ ನಲ್ಲಿ ಪಬ್ಜಿ ಮೊಬೈಲ್ ಇಂಡಿಯಾ ಮೇಲೆ ಕ್ಲಿಕ್ ಮಾಡಿದಾಗ ಫೇಸ್ಬುಕ್ ಪೇಜ್ ರೀಡೈರೆಕ್ಷನ್ ಆಗ್ತಿದೆ. ಆಯ್ದ ಬಳಕೆದಾರರಿಗೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಪಬ್ಜಿ ತನ್ನ ಡೌನ್ಲೋಡ್ ಲಿಂಕ್ ಲೈವ್ ಮಾಡಿದೆ. ಹೊಸ ರೂಪದಲ್ಲಿ ಲಾಂಚ್ ಆಗ್ತಿರೋ ಪಬ್ಜಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರಲಿದೆ.
Advertisement
Advertisement
ಪಬ್ಜಿ ಕಾರ್ಪೋರೇಷನ್ ನ ಪೇರೆಂಟ್ ಕಂಪನಿ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಸಹ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡ್ತಿದೆ ಎಂದು ಹೇಳಿದೆ.
Advertisement
Advertisement
ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್ಜಿ ಸೇರಿದಂತೆ ಚೀನಾ ಅ?ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್ಜಿ ಗೇಮ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ನಿಷೇಧಕ್ಕೊಳಗಾದ ದಿನವೇ ತಾನು ಹಿಂದಿರುಗುವ ಬಗ್ಗೆ ಪಬ್ಜಿ ವಿಶ್ವಾಸ ವ್ಯಕ್ತಪಡಿಸಿತ್ತು.