– 10 ತಿಂಗಳ ‘ಕೊರೊನಾ’ ಅಜ್ಞಾತವಾಸದ ಅಂತ್ಯಕ್ಕೆ ನಾಂದಿ!
ನವದೆಹಲಿ: 10 ತಿಂಗಳ ಕೊರೊನಾ ಅಜ್ಞಾತವಾಸದ ಬಳಿಕ ದೇಶಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು, ಕೋವಿಶೀಲ್ಡ್ ಮತ್ತು ದೇಶಿಯ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಷರತ್ತು ಬದ್ಧ ಅನುಮತಿ ನೀಡಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನಿಂದ ಹೆಚ್ಚಿನ ಮಾಹಿತಿಯನ್ನು ವಿಷಯ ತಜ್ಞರ ಸಮಿತಿ (ಎಸ್ಇಸಿ) ಕೇಳಿತ್ತು. ಇದನ್ನು ಭಾರತ್ ಬಯೋಟೆಕ್ ಕೂಡಲೇ ಒದಗಿಸಿದ ಹಿನ್ನೆಲೆಯಲ್ಲಿ ಶನಿವಾರದ ತುರ್ತು ಸಭೆ ಸೇರಿದ ತಜ್ಞರು, ಕೊವ್ಯಾಕ್ಸಿನ್ಗೂ ಷರತ್ತುಬದ್ಧ ಹಸಿರುನಿಶಾನೆ ನೀಡಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಸಿಜಿಐ) ಅಧ್ಯಕ್ಷ ವಿ.ಸೋಮಾನಿ ಎರಡು ಲಸಿಕೆಗಳ ಬಳಕೆಗೆ ಹಸಿರು ನಿಶಾನೆ ತೋರಿಸಿದೆ.
Advertisement
#WATCH live via ANI FB: Drugs Controller General of India briefs the media on COVID-19 vaccine. https://t.co/3mo97GEPcV
— ANI (@ANI) January 3, 2021
Advertisement
ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದ್ದು ಲಸಿಕೆ ಉತ್ಪಾದಕ ಸಂಸ್ಥೆಗಳು ಮಾರ್ಕೆಟ್ ಆಥರೈಸೇಷನ್, ಉತ್ಪಾದನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ.
Advertisement
Advertisement
ಕೊವಿಶೀಲ್ಡ್ ವ್ಯಾಕ್ಸಿನ್ ಹೇಗಿದೆ?: ಬ್ರಿಟನ್ನ ಆಕ್ಸ್ಫರ್ಡ್ ವಿವಿಯ ಆಸ್ಟ್ರಾಜೆನಿಕಾ ಜೊತೆ ಕೈ ಜೋಡಿಸಿ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಕೊವಿಶೀಲ್ಡ್ ಲಸಿಕೆಯನ್ನ ಸಿದ್ಧಪಡಿಸಿದೆ. ಕೊವಿಶೀಲ್ಡ್ ವ್ಯಾಕ್ಸಿನ್ ಬಹಳಷ್ಟು ಸುರಕ್ಷಿತವಾಗಿದ್ದು, ದೇಶದಲ್ಲಿ ದೊಡ್ಡ ಜನ ಸಮೂಹದ ಮೇಲೆ ಪ್ರಯೋಗ ನಡೆದಿದೆ. ಲಸಿಕೆ ಪಡೆದವರಿಗೆ ಈವರೆಗೂ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಇತರೆ ವ್ಯಾಕ್ಸಿನ್ಗಳಿಗೆ ಹೋಲಿಸಿದ್ರೆ ಕೊವಿಶೀಲ್ಡ್ ಅಗ್ಗವಾಗಿದ್ದು, ಸರ್ಕಾರದಿಂದ ಪಡೆದರೆ 440 ರೂಪಾಯಿಗೆ ಸಿಗಲಿದೆ. ಖಾಸಗಿ ಮಾರುಕಟ್ಟೆಯಲ್ಲಿ 1 ಡೋಸ್ಗೆ 700-800 ರೂ. ಇರಲಿದೆ.
#WATCH: Drugs Controller General of India briefs the media on COVID-19 vaccine. https://t.co/0PhAeVzOgC
— ANI (@ANI) January 3, 2021
ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಲ್ಲಿ ಉತ್ಪಾದನೆಯಾಗಿದ್ದು, ಸಾಗಾಣೆ ಸುಲಭವಾಗಿದೆ. ಸಾಮಾನ್ಯ ವಾತಾವರಣ 2.8 ಡಿಗ್ರಿಯಿಂದ 8 ಡಿಗ್ರಿ ಉಷ್ಣಾಂಶದಲ್ಲಿ ಶೇಖರಣೆ (ಅಂದರೆ ಸಾಮಾನ್ಯ ಫ್ರಿಡ್ಜ್ ಕೊಲಿಂಗ್ ನಲ್ಲಿ ಶೇಖರಿಸಬಹದು) ಮಾಡಬಹುದು. ಕೊವಿಶೀಲ್ಡ್ 6 ತಿಂಗಳುವರೆಗೂ ಶೇಖರಿಸಿಡಬಹುದಾಗಿದ್ದು, ಮುಚ್ಚಳ ತೆಗೆದ ಮೇಲೆ 5-6 ಗಂಟೆವರೆಗೂ ಬಳಸಲು ಯೋಗ್ಯವಾಗಿರಲಿದೆ.
ಕೋವ್ಯಾಕ್ಸಿನ್ ಹೇಗಿರಲಿದೆ: 2ನೇದಾಗಿ ಆತ್ಮನಿರ್ಭರ್ ಭಾರತ ಅಭಿಯಾನಕ್ಕೆ ಪುಷ್ಟಿ ಎಂಬಂತೆ ಐಸಿಎಂಆರ್ ಸಹಯೋಗದಲ್ಲಿ ಹೈದ್ರಾಬಾದ್ನ ಶಮೀರ್ಪೇಟ್ನ ಜಿನೋಂ ವ್ಯಾಲಿಯಲ್ಲಿ ಸ್ವದೇಶಿ ಲಸಿಕೆ ಸಿದ್ಧವಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ನವೆಂಬರ್ ಮಧ್ಯಭಾಗದಿಂದ 3ನೇ ಹಂತದ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಸುರಕ್ಷತೆ, ಪರಿಣಾಮಕಾರಿ ಬಗ್ಗೆ ಸದ್ಯಕ್ಕೆ ಅಸ್ಪಷ್ಟವಾಗಿದ್ದು, ಅಗತ್ಯ 26 ಸಾವಿರ ಅಭ್ಯರ್ಥಿಗಳ ಪೈಕಿ 23 ಸಾವಿರ ಜನರ ಮೇಲೆ ಪ್ರಯೋಗ ನಡೆಸಲಾಗಿದೆ. 3ನೇ ಹಂತದ ಫಲಿತಾಂಶ ಇನ್ನೂ ಪ್ರಕಟ ಆಗಿಲ್ಲ. ಸದ್ಯಕ್ಕೆ ಕೇವಲ 60% ನಷ್ಟು ಪರಿಣಾಮಕಾರಿ ಎಂದು ಹೇಳಲಾಗ್ತಿದೆ.
ಬ್ರಿಟನ್ ವೈರಸ್ ನಿಗ್ರಹಕ್ಕಾಗಿ ಷರತ್ತುಬದ್ಧ ಬಳಕೆಗೆ ಎಸ್ಇಸಿ ಶಿಫಾರಸು ನೀಡಿದ್ದು, ಹೀಗಾಗಿ, ಕೊವಾಕ್ಸಿನ್ ನಿರ್ಬಂಧಿತ ಬಳಕೆಗಷ್ಟೇ ಅನುಮತಿ ಸಿಕ್ಕಿದೆ. ಸಾಮಾನ್ಯ ತಾಪಮಾನದಲ್ಲಿ ಹೊಂದಿಕೊಳ್ಳುವ ಹಿನ್ನೆಲೆಯಲ್ಲಿ ಅನುಮತಿ ದೊರೆತಿದ್ದು, ಸಾಮಾನ್ಯ ಬೆಲೆಯಲ್ಲಿ ದೊರೆಯಲಿದೆ.
Vaccines of Serum Institue of India and Bharat Biotech are granted permission for restricted use in emergency situation: DCGI pic.twitter.com/fuIfPQ9i7B
— ANI (@ANI) January 3, 2021
ಲಸಿಕೆ ಕಂಪನಿಗಳಿಗೆ ತಜ್ಞರ ಸಮಿತಿ ಷರತ್ತುಗಳೇನು?
* 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು
* ಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕು
* ಕ್ಲಿನಿಕಲ್ ಟ್ರಯಲ್ಸ್ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ ಸಲ್ಲಿಸಬೇಕು
* ಲಸಿಕೆ ಹಾಕಿದ ಬಳಿಕ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ 15 ದಿನಕ್ಕೊಮ್ಮೆ ವರದಿ ನೀಡಬೇಕು.