ಲಡಾಖ್: ನಾಗರೀಕ ಹಾಗೂ ಸೇನೆಗೆ ಸಂಬಂಧಿಸಿದ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದ ಚೀನಿ ಸೈನಿಕನನ್ನು ಲಡಾಖ್ ಬಳಿ ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Chinese soldier apprehended by security forces in Chumar-Demchok area of Ladakh. He might have entered Indian territory inadvertently. He will be returned to Chinese Army as per established protocol after following due procedure: Sources pic.twitter.com/i23MjkNyqA
— ANI (@ANI) October 19, 2020
Advertisement
ಪ್ರಾಥಮಿಕ ಮಾಹಿತಿ ಪ್ರಕಾರ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಸೈನಿಕ ನಾಗರಿಕ ಹಾಗೂ ಸೇನೆಗೆ ಸಂಬಂಧಿಸಿದ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಲಡಾಖ್ನ ಡೆಮ್ಚೋಕ್ ಬಳಿ ಭಾರತೀಯ ಸೈನಿಕರು ಸೆರೆ ಹಿಡಿದಿದ್ದಾರೆ. ವಿಚಾರಣೆ ಹಾಗೂ ಶಿಷ್ಟಾಚಾರಗಳನ್ನು ಮುಗಿಸಿದ ಬಳಿಕ ಭಾರತ ಎಚ್ಚರಿಕೆ ನೀಡಿ ಅಧಿಕೃತವಾಗಿ ಚೀನಾಗೆ ಒಪ್ಪಿಸುವ ಸಾಧ್ಯತೆಯಿದೆ.
Advertisement
BIG: Chinese PLA soldier caught in Demchok, Ladakh by Indian Army. Top Govt sources tell me. India likely to formally hand him over to Chinese side with a warning soon. Statement expected shortly from the Indian Army.
— Aditya Raj Kaul (@AdityaRajKaul) October 19, 2020
Advertisement
ಭಾರತೀಯ ಸೇನೆಯಿಂದ ಶೀಘ್ರ ಮಾಹಿತಿ ಪ್ರಕಟವಾಗುವ ಸಾಧ್ಯತೆಯಿದೆ. ಅಲ್ಲದೆ ಚೀನಾ ಸೈನಿಕ ತನ್ನ ಕಾರ್ಯವಿಧಾನ ಮುಗಿಸಿದ ಬಳಿಕ ಪ್ರೋಟೋಕಾಲ್ ಪ್ರಕಾರ ಚೀನಾಗೆ ಹಿಂದಿರುಗುತ್ತಿದ್ದ ಎಂದು ಸಹ ಹೇಳಲಾಗುತ್ತಿದೆ. ಪ್ರಮಾದವಶಾತ್ ಭಾರತದ ಗಡಿಯೊಳಗೆ ಪ್ರವೇಶಿಸಿರಬಹುದು ಎಂದು ಸಹ ವರದಿಯಾಗಿದೆ.
Advertisement
ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವಾಗಲೇ ಸೈನಿಕನನ್ನು ವಶಕ್ಕೆ ಪಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ತಯಾರಾಗುವಂತೆ ತಮ್ಮ ಸೇನೆಗೆ ಸೂಚಿಸಿದ ಕರಿತು ಸಹ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಚೀನಿ ಸೈನಿಕ ಸೆರೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.