ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆಯ ಅಜೇಯ ಶತಕದ ಆಟವಾಡಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟಿದ್ದಾರೆ.
ಎರಡನೇ ದಿನದಾಟಕ್ಕೆ 5 ವಿಕೆಟ್ ಕಳೆದುಕೊಂಡು ಭಾರತ 277 ರನ್ ಹೊಡೆಯುವ ಮೂಲಕ 82 ರನ್ಗಳ ಮುನ್ನಡೆಯಲ್ಲಿದೆ.
Advertisement
ನಿನ್ನೆ 28 ರನ್ ಗಳಿಸಿದ್ದ ಶುಭ್ಮನ್ ಗಿಲ್ ಇಂದು 45 ರನ್(65 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಚೇತೇಶ್ವರ ಪೂಜಾರ 17 ರನ್, ಹನುಮ ವಿಹಾರಿ 21 ರನ್, ರಿಷಭ್ ಪಂತ್ 29 ರನ್ ಹೊಡೆದು ಔಟಾದರು.
Advertisement
Advertisement
ವಿಕೆಟ್ ಉರುಳುತ್ತಿದ್ದಾಗ ಮುರಿಯದ 6ನೇ ವಿಕೆಟ್ಗೆ ಜೊತೆಯಾದ ಜಡೇಜಾ ಜೊತೆ ಸೇರಿ ರಹಾನೆ 179 ಎಸೆತದಲ್ಲಿ 100 ರನ್ ಜೊತೆಯಾಟವಾಡಿದರು. ರಹಾನೆ 104 ರನ್(200 ಎಸೆತ, 12 ಬೌಂಡರಿ) ಹೊಡೆದರೆ ಜಡೇಜಾ 40 ರನ್(104 ಎಸೆತ, 1 ಬೌಂಡರಿ) ಹೊಡೆದಿದ್ದಾರೆ.
Advertisement
Another great day for us. Proper test cricket at its best. Absolutely top knock from Jinks????@ajinkyarahane88
— Virat Kohli (@imVkohli) December 27, 2020
ಟ್ವೀಟ್ ಮಾಡಿ ರಹನೆಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ, ನಮಗೆ ಮತ್ತೊಂದು ಉತ್ತಮ ದಿನ. ಸರಿಯಾದ ಟೆಸ್ಟ್ ಕ್ರಿಕೆಟ್. ಜಿಂಕ್ಸ್ನಿಂದ ಮತ್ತೊಂದು ಶತಕ ಎಂದು ಶ್ಲಾಘಿಸಿದ್ದಾರೆ.
Brilliant hundred by @ajinkyarahane88 .
Determination and class.
— Virender Sehwag (@virendersehwag) December 27, 2020
ವೀರೇಂದ್ರ ಸೆಹ್ವಾಗ್ ಬ್ರಿಲಿಯಂಟ್ ಸೆಂಚೂರಿ ಎಂದು ಹೇಳಿದರೆ, ನಾಯಕನ ಶತಕದಾಟ, ಗಿಲ್, ಪಂತ್ ಮತ್ತು ಜಡೇಜಾ ಅವರಿಂದ ಉಪಯುಕ್ತ ಕೊಡುಗೆಗಳು ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
Brilliant captains knock from @ajinkyarahane88 Great exhibition of character. Useful contributions from Gill, Pant and Jadeja. Decisive 3rd day looms. #INDvAUS pic.twitter.com/S8FiKmNjkP
— VVS Laxman (@VVSLaxman281) December 27, 2020