ನವದೆಹಲಿ: ಬ್ರಿಟನ್ನಲ್ಲಿ ಕಾಣಿಸಿಕೊಂಡ ಹೊಸ ಕೊರೋನಾ ವೈರಸ್ ಈಗ ಭಾರತಕ್ಕೂ ಬಂದಿದೆ. ದೆಹಲಿಯಲ್ಲಿ ಐವರಿಗೆ, ಚೆನೈನಲ್ಲಿ ಒಬ್ಬರಿಗೆ ಸೋಂಕು ಬಂದಿದೆ.
ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಹಿನ್ನಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಿದಾಗ ಐವರಿಗೆ ತಗುಲಿರುವುದು ಗೊತ್ತಾಗಿದೆ.
Advertisement
Advertisement
ಇನ್ನೊಬ್ಬ ಪ್ರಯಾಣಿಕ ಲಂಡನ್ನಿಂದ ದೆಹಲಿಗೆ ಬಂದು ಅಲ್ಲಿಂದ ಚೆನ್ನೈಗೆ ಹೋಗಿದ್ದಾನೆ. ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಇದನ್ನು ಓದಿ: 4 ವಾರದ ಹಿಂದೆ ಇಂಗ್ಲೆಂಡ್ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ?
Advertisement
ಈ ಮೂಲಕವಾಗಿ ಯುಕೆ ಕೊರೊನಾ ವೈರಸ್ ಸೋಕು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಇಂಗ್ಲೆಂಡ್, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಜನರಲ್ಲಿ ಹೊಸ ಮಾದರಿಯ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕವಾಗಿ ಯುಕೆಯಲ್ಲಿರುವ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.
Advertisement
ಸೋಮವಾರ ಡಿಸೆಂಬರ್ 23 ರಿಂದ 31ರ ತನಕ ಇಂಗ್ಲೆಂಡ್ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇಂದು ಕೇಂದ್ರ ಸರ್ಕಾರ ಬ್ರಿಟನ್ ಮೂಲಕ ಭಾರತಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.