ನವದೆಹಲಿ: ಭಾರತದ ಕೊರೊನಾ ಪರಿಸ್ಥಿತಿ ಭೀಕರವಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಇನ್ನೂ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳು ಚಿಂತಿಗೀಡು ಮಾಡಿವೆ. ಇದೆಲ್ಲವನ್ನು ಗಮನಿಸಿದರೆ ಎರಡನೇ ವರ್ಷ ಇನ್ನೂ ಭಯನಕವಾಗಿರುವ ಬಗ್ಗೆ ಎಚ್ಚರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಆತಂಕ ವ್ಯಕ್ತಪಡಿಸಿದೆ.
Media briefing on #COVID19 with @DrTedros https://t.co/TtjhUc524Z
— World Health Organization (WHO) (@WHO) May 14, 2021
Advertisement
ಈ ಬಗ್ಗೆ ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಭಾರತದಲ್ಲಿನ ಕೊರೊನಾ ಪರಿಸ್ಥಿತಿಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಂದಿಸಿದ್ದು, ಸಾವಿರಾರು ಆಕ್ಸಿಜನ್ ಕಾನ್ಸಟ್ರೇಟರ್ಗಳು, ಮೊಬೈಲ್ ಫೀಲ್ಡ್ ಹಾಸ್ಪಿಟಲ್ಗಳಿಗಾಗಿ ಟೆಂಟ್ಗಳು, ಮಾಸ್ಕ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಪೂರೈಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಭಾರತದ ಬಗ್ಗೆ ಇನ್ನೂ ಕಾಳಜಿ ವಹಿಸುವ ಅಗತ್ಯವಿದ್ದು, ಹಲವು ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಚಿಂತೆಗೀಡು ಮಾಡಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಸಾವುಗಳನ್ನು ನೋಡಿದರೆ ಭಯವಾಗುತ್ತಿದೆ. ಭಾರತಕ್ಕೆ ಬೆಂಬಲ ನೀಡುತ್ತಿರುವ ಸ್ಟೇಕ್ಹೋಲ್ಡರ್ಸ್ ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Advertisement
ತುರ್ತುಪರಿಸ್ಥಿತಿಯಂತಹ ಸಂದರ್ಭ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ನೇಪಾಳ, ಶ್ರೀಲಂಕಾ, ವಿಯಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್ ಹಾಗೂ ಈಜಿಪ್ಟ್ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.