– ರಾಜ್ಯದಲ್ಲೆ ಮೊದಲ ಕೋವಿಡ್ ಟೇಲಿ ಕೇರ್ ಸೆಂಟರ್
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಕಿಂತರಿಗೆ ವೈದ್ಯಕೀಯ ನೆರವು ಒದಗಿಸಲು ಮೈಸೂರು ಮಹಾನಗರ ಪಾಲಿಕೆ ‘ಟೆಲಿ ಕೇರ್’ ಆರಂಭಿಸಿದೆ.
ಮೈಸೂರಿನ ಸ್ಥಳೀಯ 30 ವೈದ್ಯರು ಹಾಗೂ ಬ್ರಿಟನ್ ನಲ್ಲಿ ನೆಲೆಸಿರೋ 40 ಕನ್ನಡಿಗ ವೈದ್ಯರು ಟೆಲಿ ಕೇರ್ ಮೂಲಕ ಸೋಂಕಿತರಿಗೆ ವೈದ್ಯಕೀಯ ನೆರವು ಒದಗಿಸುತ್ತಿದ್ದಾರೆ. ಸೋಂಕಿತರು ತುರ್ತಾಗಿ ವೈದ್ಯಕೀಯ ಸಲಹೆ ಪಡೆಯಬೇಕಿದ್ದರೆ 0821 – 2420112 ಅಥವಾ 0821 – 2420113 ಈ ನಂಬರ್ ಗೆ ಟೆಲಿಕೇರ್ ಕೇಂದ್ರಕ್ಕೆ ಕರೆ ಮಾಡಬೇಕು.
ಸೋಂಕಿತರ ಸಮಸ್ಯೆಗೆ ಅನುಗುಣವಾಗಿ ಅದಕ್ಕೆ ಸಂಬಂಧಪಟ್ಟ ತಜ್ಞ ವೈದ್ಯರು ಸೋಂಕಿತರಿಗೆ ಕರೆ ಮಾಡಿ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಅಲ್ಲದೆ ಮೈಸೂರು ನಗರ ವ್ಯಾಪ್ತಿಯಲ್ಲಿನ ಸೋಂಕಿತರಿಗೆ ತುರ್ತು ಔಷಧದ ಅಗತ್ಯವಿದ್ದರೆ ಇಲ್ಲಿಂದ ಸರಬರಾಜು ಮಾಡಲಾಗುತ್ತದೆ.
ಮಹಾನಗರ ಪಾಲಿಕೆಯ ಈ ಕಾರ್ಯಕ್ಕೆ ಮೈಸೂರು ಸಿಟಿಜನ್ ಫೌಂಡೇಶನ್ ಸೇರಿದಂತೆ ಹಲವು ಸಂಸ್ಥೆಗಳು ಕೈ ಜೋಡಿಸಿವೆ. ಮೈಸೂರಿನ ಗೋಪಾಲಗೌಡ ಆಸ್ಪತ್ರೆಯ ಹಿರಿಯ ವೈದ್ಯ ಡಾ. ರಘುನಾಥ್ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.