– ಭಾರತದಲ್ಲೂ ಲಸಿಕೆ ಹಂಚಿಕೆಗೆ ಅನುಮತಿ ಕೇಳಿದ ಫೈಝರ್
ಲಂಡನ್/ನವದೆಹಲಿ: ಇಡೀ ಮಾನವಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ಕಟ್ಟಿಹಾಕಲು ಬ್ರಿಟನ್ನಲ್ಲಿ ಫೈಝರ್ ಲಸಿಕೆಯನ್ನು ಮಂಗಳವಾರದಿಂದ ಹಂಚಿಕೆ ಮಾಡಲಾಗುತ್ತಿದೆ.
ಆರಂಭದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ, 80 ವರ್ಷ ಮೇಲ್ಪಟ್ಟವರಿಗೆ, ಆರೈಕಾ ಕೇಂದ್ರಗಳಲ್ಲಿ ಇರುವ ಮಂದಿಗೆ ಲಸಿಕೆ ನೀಡಲಾಗುತ್ತದೆ. 2 ವಾರಗಳಲ್ಲಿ ಇವರಿಗೆಲ್ಲ ನೀಡಿದ ಮೇಲೆ ಈಗಾಗಲೇ ಗುರುತಿಸಿರುವ ಪ್ರಾಶಸ್ತ್ಯದ ಗುಂಪುಗಳಿಗೆ ಹಂಚಿಕೆ ಮಾಡಲಾಗುತ್ತದೆ.
Advertisement
Advertisement
ನಂತರ ಯಾವ ವರ್ಷದವರಿಗೆ ಸಿಗುತ್ತೆ?
75 ಮತ್ತು ಮೇಲ್ಪಟ್ಟು, 70 ಮತ್ತು ಮೇಲ್ಪಟ್ಟು, 65 ಮೇಲ್ಪಟ್ಟು, 16 ರಿಂದ 64 ವರ್ಷವದರಿಗೆ ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ನೀಡಲಾಗುತ್ತದೆ. ಆರಂಭದಲ್ಲಿ 8 ಲಕ್ಷ ಲಸಿಕೆ ಬರಲಿದ್ದು, ಇದು 4 ಲಕ್ಷ ಮಂದಿಗೆ ಸಾಕಾಗುತ್ತದೆ.
Advertisement
ತಾನು ತಯಾರಿಸಿದ ಕೊರೊನಾ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ನ.18 ರಂದು ಫೈಝರ್ ಕಂಪನಿ ಅಧಿಕೃತವಾಗಿ ತಿಳಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಂಗ್ಲೆಂಡ್ ಸರ್ಕಾರ ಈ ವಾರದಿಂದಲೇ ಲಸಿಕೆ ವಿತರಿಸಲು ಮುಂದಾಗಿದೆ.
Advertisement
ಇಂಗ್ಲೆಂಡ್ ಸರ್ಕಾರ ಈಗಾಗಲೇ 4 ಕೋಟಿ ಡೋಸ್ಗಳಿಗೆ ಆರ್ಡರ್ ಮಾಡಿದ್ದು 2 ಕೋಟಿ ಜನರಿಗೆ 2 ಡೋಸ್ ನೀಡಬಹುದಾಗಿದೆ. ಆರಂಭದಲ್ಲಿ 1 ಕೋಟಿ ಲಸಿಕೆ ಬರಲಿದ್ದು, ಈ ಪೈಕಿ ಮುಂದಿನ ಕೆಲ ದಿನದಲ್ಲಿ 8 ಲಕ್ಷ ಲಸಿಕೆ ಇಂಗ್ಲೆಂಡ್ಗೆ ಬರಲಿದೆ.
ಭಾರತದಲ್ಲೂ ಲಸಿಕೆ ಮಾರಾಟಕ್ಕೆ ಫೈಝರ್ ಅರ್ಜಿ ಹಾಕಿಕೊಂಡಿದೆ. ಈ ಬೆನ್ನಲ್ಲೇ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಪುಣೆಯ ಸಿರಂ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ.
ಭಾರತದಲ್ಲಿಈ ರೀತಿ ಮನವಿ ಮಾಡಿಕೊಂಡ ಮೊದಲ ದೇಶಿಯ ಸಂಸ್ಥೆ ಸಿರಂ ಆಗಿದೆ. ಆಕ್ಸ್ಫರ್ಡ್ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಸಂಶೋಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸಿರಂ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ.
ಸದ್ಯ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಬಳಕೆಗೆ ಅನುಮತಿ ಕೋರಲಾಗಿದೆ. ಕೋವಿಶೀಲ್ಡ್ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಸಿರಂ ಸಂಸ್ಥೆ ಹೇಳಿಕೊಂಡಿದೆ.