ಬೆಂಗಳೂರು: ಒಂದು ವಾರದ ಕಾಲ ಲಾಕ್ಡೌನ್ ಜಾರಿಯಾಗಿ ಮೂರು ದಿನ ಕಳೆದಿದೆ. ಆದರೂ ಜನರು ಮಾತ್ರ ಎಂದಿನಿಂದ ಓಡಾಡುತ್ತಿದ್ದು, ವ್ಯಾಪಾರ-ವಹಿವಾಟಿನಲ್ಲಿ ಬ್ಯುಸಿಯಾಗಿದ್ದಾರೆ.
ಬ್ಯಾಟರಾಯನಪುರ ಮಾರ್ಕೆಟ್ನಲ್ಲಿ ಬೆಳ್ಳಂಬೆಳಗ್ಗೆ ನೂರಾರು ಜನರು ವ್ಯಾಪಾರಕ್ಕೆ ಮುಗಿಬಿದ್ದಿದ್ದಾರೆ. ಇದರಿಂದ ಮಾರ್ಕೆಟ್ ಏರಿಯಾದಲ್ಲಿ ವಾಹನಗಳ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಮಾರ್ಕೆಟ್ನಲ್ಲಿ ಯಾವುದೇ ಲಾಕ್ಡೌನ್ ನಿಯಮವನ್ನು ಪಾಲನೆ ಮಾಡುತ್ತಿಲ್ಲ.
Advertisement
Advertisement
ಈ ಹಿಂದೆ ಯಲಹಂಕ ಬಳಿ ಈ ಮಾರ್ಕೆಟ್ ನಡೆಯುತ್ತಿತ್ತು. ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ಯಲಹಂಕದಿಂದ ಬ್ಯಾಟರಾಯನಪುರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಶಾಲವಾದ ಖಾಲಿ ಜಾಗದಲ್ಲಿ ಮಾರ್ಕೆಟ್ ನಡೆಸಲು ಬಿಬಿಎಂಪಿ ಅವಕಾಶ ನೀಡಿತ್ತು. ಆದರೆ ಲಾಕ್ಡೌನ್ ನಿಯಮ ಗಾಳಿಗೆ ತೋರಿ ಅಡ್ಡಾದಿಡ್ಡಿಯಾಗಿ ಜನರು ಮತ್ತು ವಾಹನಗಳು ಓಡಾಡುತ್ತಿವೆ.
Advertisement
Advertisement
ಇತ್ತ ಯಶವಂತಪುರ ಸಿಗ್ನಲ್ ಬಳಿಯೂ ವಾಹನ ಸಂಚಾರ ಹೆಚ್ಚಾಗಿದೆ. ಅನಗತ್ಯವಾಗಿ ವಾಹನಗಳು ಓಡಾಡುತ್ತಿವೆ. ಇನ್ನೂ ನಗರದ ಬಳ್ಳಾರಿ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ ಹೆಚ್ಚಾಗಿದೆ. ಫ್ಲೈಓವರ್ಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಜನರು ವಾಕ್ ಮಾಡುತ್ತಿದ್ದಾರೆ. ಅಲ್ಲದೇ ರಸ್ತೆಯ ಪಕ್ಕದ ಅಲ್ಲಲ್ಲಿ ಹಣ್ಣು, ಹೂ, ತರಕಾರಿ ವ್ಯಾಪಾರ ಕೂಡ ಜೋರಾಗಿ ನಡೆಯುತ್ತಿದೆ.