ಯುವಕನೊಬ್ಬ ಅಪಾಯಕಾರಿಯಾದ ಬೈಕ್ ಸ್ಟಂಟ್ ಮಾಡಲು ಹೋಗಿ ಕೆಳಗೆ ಬೀಳುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಂದಿನ ಯುವಕರು ಟಿಕ್ಟಾಕ್, ಇನ್ ಸ್ಟಾಗ್ರಾಮ್ನಂತಹ ಸೋಶಿಯಲ್ ಮೀಡಿಯಾ ಆ್ಯಪ್ಗಳಲ್ಲಿ ಬ್ಯೂಸಿಯಾಗಿದ್ದರೆ, ಈ ಯುವಕ ಅಪಾಯಕಾರಿಯಾದ ಬೈಕ್ ಸ್ಟಂಟ್ವೊಂದನ್ನು ಮಾಡಲು ಮುಂದಾಗಿದ್ದಾನೆ.
ವೀಡಿಯೋದಲ್ಲಿ ಮೋಟಾರ್ ಬೈಕ್ ಮೇಲೆ ನಿಂತು ಬೈಕ್ ಓಡಿಸಲು ಯುವಕ ಮುಂದಾಗುತ್ತಾನೆ. ಬೈಕ್ ಸರಿಯಾಗಿ ಹಿಡಿದುಕೊಳ್ಳದೇ ಬೈಕ್ ಸೀಟಿನ ಮೇಲೆ ನಿಂತುಕೊಳ್ಳಲು ಪ್ರಯತ್ನಿಸಿದಾಗ, ನಿಯಂತ್ರಣ ತಪ್ಪಿ ಯುವಕ ಕೆಳಗೆ ಹಾರಿ ಬೀಳುತ್ತಾನೆ. ಆಗ ಆತನ ತಲೆಗೆ ಕೊಂಚ ಹಾನಿಯಾಗುತ್ತದೆ. ಆದರೆ ಅದೃಷ್ಟವಶತ್ ಯುವಕ ಪ್ರಾಣಾಪಾಯದಿಂದ ಪಾರಾಗುತ್ತಾನೆ.
Advertisement
Advertisement
ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ಮಾರ್ಚ್ 25ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೋಡಿದ್ರಾ ನಿಮ್ಮ ಸ್ನೇಹಿತನಿಗೆ ಏನು ಆಯಿತೆಂದು. ದಯವಿಟ್ಟು ಇಂತಹ ದುಸ್ಸಾಹಸಗಳನ್ನು ಮಾಡುವುದನ್ನು ನಿಲ್ಲಿಸಿ. ಸುರಕ್ಷತೆ ಹಾಗೂ ಟ್ರಾಫಿಕ್ ನಿಯಮಗಳ ಬಗ್ಗೆ ಅರಿತುಕೊಳ್ಳಿ. ಗಮನಿಸಿ ನಿಮ್ಮ ಮಕ್ಕಳು/ ಸ್ನೇಹಿತರು ಮಾಡುವ ಇಂತಹ ಮೂರ್ಖತನದ ಸಾಹಸಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡಲು ಬಿಡಬೇಡಿ ಎಂದು ಬರೆದು ಹಾಕಿಕೊಂಡಿದ್ದಾರೆ.
Advertisement
क्या आप अपने बच्चों/मित्रों के साथ ऐसा हादसा होते देख सकते हैं?
अगर नहीं? तो उन्हें ऐसी मूर्खता करने से रोकें. सुरक्षा को प्राथमिकता देना एवं यातायात नियमों का पालन करना सिखाएं.
Note – Please never let your kids/friends upload & promote such stupidity on SM. pic.twitter.com/gNFpF5AOtI
— Dipanshu Kabra (@ipskabra) March 25, 2021
Advertisement
ವೈರಲ್ ಆಗಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 18,000ಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.