ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯದ ಕುರಿತಾಗಿ ಕಾಳಜಿಯನ್ನು ವಹಿಸುತ್ತಾರೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಬಣ್ಣವು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಕೆಲವು ಮನೆ ಮನೆಮದ್ದು ಮತ್ತು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದಾಗಿದೆ.
* ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಿದ್ದೀರಾ ಎಂದಾದರೆ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ತ್ವಚೆಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.
Advertisement
Advertisement
* ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಸನ್ಸ್ಕ್ರೀನ್ ಲೋಶನ್ ಚರ್ಮಗಳಿಗೆ ಹಚ್ಚ ಬಹುದಾಗಿದೆ.
Advertisement
* ಬಿಸಿಲು ಮುಖಕ್ಕೆ ತಾಗದಂತೆ ಹ್ಯಾಟ್ ಹಾಕಿ, ಸ್ಟಾಲ್ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು.
Advertisement
* ಬೇಸಿಗೆ ಕಾಲದಲ್ಲಿ ದೇಹ ತ್ವಚೆ ಡ್ರೈ ಆಗುತ್ತಿರುತ್ತದೆ. ವಿಟಮಿನ್ಗಳನ್ನು ಹೊಂದಿರುವ ಹಣ್ಣು ಹಂಪಲುಗಳು, ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿರಿಸುವ ಮೂಲಕವೂ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.
* ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆಯದು.
* ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆದರೆ ಫ್ರೆಶ್ ಅನ್ನಿಸುತ್ತದೆ.
* ಬೇಸಿಗೆಯಲ್ಲಿ ತಣ್ಣಿರಿನಿಂದ ಮುಖ ತೊಳೆಯಿರಿ. ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್ ವಾಟರ್ ಹಚ್ಚಬಹುದಾಗಿದೆ.
* ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.
* ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.