ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಸಹಜ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಬೇವು ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ನೀವು ಕೆಮಿಕಲ್ ಅಂಶ ಇರುವ ಶಾಂಪೂ ಬಳಸುವ ಬದಲಾಗಿ ಮನೆಯಲ್ಲಿಯೇ ಸಿಗುವ ಈ ಬೇವನ್ನು ಬಳಸಿ ತಲೆ ಹೊಟ್ಟನ್ನು ನಿವಾರಿಸ ಬಹುದಾಗಿದೆ.
Advertisement
* ಬೇವಿನ ಎಣ್ಣೆ ಕೂದಲ ಆರೈಕೆಗೆ ಹಾಗೂ ತಲೆಹೊಟ್ಟಿನ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು
Advertisement
Advertisement
* ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ತಿನ್ನಬೇಕು. ಇಲ್ಲವಾದಲ್ಲಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ತಿಳಿ ನೀರನ್ನು ಕುಡಿಯಬಹುದು ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಒಮ್ಮೆ ನೀವು ಇದನ್ನು ಪ್ರಯತ್ನಿಸಿದರೆ ಇದರ ಲಾಭದ ಅರಿವು ನಿಮಗಾಗುತ್ತದೆ.
Advertisement
* ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ. ನಂತರ ತಲೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿನ ತಂಪಾದ ಮತ್ತು ಬೇವಿನ ಆ್ಯಂಟಿ ಫಂಗಲ್ ಗುಣಲಕ್ಷಣ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.
* ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ನಂತರ ಈ ಪೇಸ್ಟನ್ನು ತಲೆಬುರುಡೆಗೆ ಮಾಸ್ಕ್ ಹಾಕಿಕೊಳ್ಳಿ.
* ಬೇವನ್ನು ನೀವು ಕಂಡೀಶನರ್ ಆಗಿಯೂ ಬಳಸಬಹುದು. ಈ ಬೇವಿನ ಕಂಡೀಶನರ್ ಮಾಡಲು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಸಿ, ತಣ್ಣಗಾಗಲು ಬಿಡಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಈ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.