ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್ ನ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ನಂತರ ಅಲ್ಲಲ್ಲಿ ಬೇಕಾಬಿಟ್ಟಿ ಪಾರ್ಟಿ ಮಾಡಿದ್ದೇ ಕೊರೊನಾ ಪಸರಿಸಲು ಕಾರಣ ಅನ್ನೋ ಮಾಹಿತಿ ಬಹಿರಂಗವಾಗಿದೆ. ಉಡುಪಿ ಜಿಲ್ಲೆ ಮಣಿಪಾಲದ ಎಂಐಟಿ ಕ್ಯಾಂಪಸ್ ನಲ್ಲಿ ದಿನೇದಿನೇ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ.
Advertisement
ಒಂದೇ ಸಂಸ್ಥೆಯಲ್ಲಿ 950 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿದೆ. ಈ ಮಾಹಿತಿಯನ್ನು ಸ್ವತಃ ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಕೊರೊನಾ ಹೆಚ್ಚಾಗುತ್ತಲೇ ಉಡುಪಿಯ ಎಂಐಟಿ ಶಿಕ್ಷಣ ಸಂಸ್ಥೆಗೆ ದೌಡಾಯಿಸಿದ ಅವರು ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಜೊತೆ ಸಭೆ ಮಾಡಿದರು. ಯುವಕರಲ್ಲಿ ಕೊರೊನಾ ವ್ಯಾಪಿಸಿರುವುದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆದ್ರೆ ಕೊರೊನಾ ವ್ಯಾಪಿಸುವ ಸಾಧ್ಯತೆ ಇದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
Advertisement
Advertisement
ಕ್ಯಾಂಪಸ್ ನಲ್ಲಿ 9000 ಕ್ಕೂ ಹೆಚ್ವು ಟೆಸ್ಟ್ ಆಗಿದೆ. ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣ ಇಲ್ಲ ಎಂಬೂದು ಸಮಾಧಾನಕರ. ವಿದ್ಯಾರ್ಥಿಗಳು ಕೊರೊನಾ ಪಸರಿಸುವ ವಾಹಕ ಆಗುತ್ತಾರೆ. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಮನೆಗೆ ಕಳುಹಿಸಲಾಗುವುದು. ಮಾಹೆ ವಿವಿಗೂ ಸೂಕ್ತ ಮುಂಜಾಗೃತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅತೀ ಹೆಚ್ಚು ಎರಡನೇ ಅಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪಾಸಿಟಿವ್ ಪ್ರಕರಣ ಬರುತ್ತಿರುವುದು ನಿಜ. ಆದರೆ ಮಾರ್ಟಾಲಿಟಿ ರೇಟ್ ಕಡಿಮೆ ಪ್ರಮಾಣದಲ್ಲಿರುವುದು ನೆಮ್ಮದಿಯ ವಿಚಾರ. ಸಾವಿನ ಸಂಖ್ಯೆಯನ್ನು ನಿಯಂತ್ರಿಸುವುದು ನಮ್ಮ ಗುರಿ. ಸಾವಿನ ಸಂಖ್ಯೆ ಕಡಿಮೆಯಾದಷ್ಟು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
Advertisement
ಎರಡು ವಾರದಲ್ಲಿ ಮಾರ್ಗಸೂಚಿ ಬದಲಾವಣೆ
ಕೊರೊನಾ ವಿಚಾರದಲ್ಲಿ ಮುಖ್ಯಮಂತ್ರಿಗಳು ಆಯಾಯ ಸಂದರ್ಭಗಳಲ್ಲಿ ಅವಲೋಕಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಮುಂದಿನ ಎರಡು ವಾರಗಳ ಬೆಳವಣಿಗೆ ಅವಲೋಕಿಸಿ ತೀರ್ಮಾನಿಸುತ್ತಾರೆ. ಮಾರ್ಗಸೂಚಿ ಬದಲಾಗಲಿದೆ. ರೋಗ ಲಕ್ಷಣ ಇಲ್ಲದ, ಪಾಸಿಟಿವ್ ಬಂದವರಿಗೆ 14 ದಿನ ಕಡ್ಡಾಯ ಕ್ವಾರಂಟೈನ್ ಮಾಡಲೇಬೇಕು ಎಂದರು.