ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಅವರಿಗೆ ಡೊಮಿನೊಸ್ ಪಿಜ್ಜಾವನ್ನು ಜೀವನ ಪೂರ್ತಿಯಾಗಿ ಉಚಿತವಾಗಿ ಕೊಡುವುದಾಗಿ ಡೊಮಿನೊಸ್ ಇಂಡಿಯಾ ಟ್ವೀಟ್ ಮಾಡಿದೆ.
Advertisement
ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಇಷ್ಟದ ತಿನಿಸಿನ ಬಗ್ಗೆ ಮಾತನಾಡಿದ್ದಾರೆ. ಈ ಮೆಡಲ್ ಸಿಕ್ಕ ಬಳಿಕ ನಿಮ್ಮ ಮೊದಲ ಕೆಲಸ ಏನಾಗಿರುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೀರಾಬಾಯಿ ಪಿಜ್ಜಾ ತಿನ್ನೋದೇ ನನ್ನ ಮೊದಲ ಅಸೆ ಅಂತ ಹೇಳಿದ್ದಾರೆ. ನನಗೆ ಪಿಜ್ಜಾ ಅಂದ್ರೆ ತುಂಬಾನೇ ಇಷ್ಟ. ಆದರೆ ಕೆಲ ದಿನಗಳಿಂದ ಪಿಜ್ಜಾ ತಿನ್ನದೇ ಇರೋದ್ರಿಂದ ಕೊಂಚ ಜಾಸ್ತಿನೇ ತಿಂತೀನಿ ಅಂತ ಮೀರಾ ನಗೆ ಚಟಾಕಿ ಹಾರಿಸಿದ್ದಾರೆ.
Advertisement
Name a better duo than this, we’ll wait! ????????????#DominosPizza #TokyoOlympics pic.twitter.com/n7tMh3nnro
— dominos_india (@dominos_india) July 24, 2021
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೊಮಿನೊಸ್ ಇಂಡಿಯಾ ಮೀರಾಬಾಯಿ ಚಾನು ಹೇಳಿದ್ದು ನಮಗೆ ಕೇಳಿಸಿದೆ. ಇನ್ನು ಮುಂದೆ ಮೀರಾಬಾಯಿ ಚಾನು ಪಿಜ್ಜಾಗಾಗಿ ಕಾಯುವುದು ಬೇಡ. ಅವರಿಗೆ ಜೀವನ ಪೂರ್ತಿ ಉಚಿತ ಪಿಜ್ಜಾವನ್ನು ನೀಡಲಿದ್ದೇವೆ ಎಂದು ಹೇಳಿದೆ. ಈ ಕುರಿತು ಟ್ವಿಟರ್ನಲ್ಲಿ ಡೊಮಿನೊಸ್ ಇಂಡಿಯಾ ಬರೆದುಕೊಂಡಿದೆ. ಅಲ್ಲದೇ ಇಂಫಾಲ್ನಲ್ಲಿರುವ ಅವರ ಮನೆಗೆ ಚಾನು ಅವರ ಗೆಲುವನ್ನು ಸಂಭ್ರಮಿಸಲು ಪಿಜ್ಜಾ ಕಳುಹಿಸಿಕೊಟ್ಟಿದೆ. ಡೊಮಿನೊಸ್ ಸಂಸ್ಥೆ ಮಾಡಿರೋ ಟ್ವೀಟ್ಗೆ ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು, ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರ ಆಸೆಯನ್ನ ಪೂರ್ತಿ ಮಾಡೋ ನಿಟ್ಟಿನ ಕೆಲಸ ಮಾಡುತ್ತಿರೋದಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದು ಅತೀವ ಆನಂದ ನೀಡಿದೆ: ಮೀರಾಬಾಯಿ ಚಾನು
Advertisement
Even as we prepare to give #MirabaiChanu a hero’s welcome and let her eat pizzas to her heart’s content, our Imphal team went to her house to congratulate her family with what else but Domino’s Pizza @dominos_india. Congratulations @mirabai_chanu you have done India proud! pic.twitter.com/IsGry24pFZ
— Pratik Pota (@pratikpota) July 24, 2021
ಮೀರಾಬಾಯಿ ಚಾನು ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಭಾರತೀಯರ ನಿರೀಕ್ಷೆ ಹುಸಿಗೊಳಿಸದ ಮೀರಾ ಅವರು ಮೊದಲ ದಿನವೇ ಬೆಳ್ಳಿ ಪದಕ ಗೆದ್ದು ಶುಭಾರಂಭ ಮಾಡಿದ್ದಾರೆ. ಮೀರಾ ಅವರ ಗೆಲುವು ಭಾರತದ ಎಲ್ಲ ಕ್ರೀಡಾಪಟುಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬುವಂತೆ ಮಾಡಿದೆ. ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಮೀರಾಬಾಯಿ ಚಾನು ಅವರು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
What is common between India’s Olympic medal ????and everytime you say you’ll just have one slice???? ?
“It’s just the first of manyyyyy ” ???????????????????????? #DominosPizza #Tokyo2020 #TokyoOlympics #MirabaiChanu
— dominos_india (@dominos_india) July 24, 2021
49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟಿದ್ದಾರೆ. ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದರು.
I am thankful to our entire nation for their prayers and goodwishes. pic.twitter.com/z0gH6Pnn6l
— Saikhom Mirabai Chanu (@mirabai_chanu) July 25, 2021
84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಣರ್ಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕಣರ್ಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.