ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ಮುಂಭಾಗ ಬೆಡ್ ಸಿಗದಕ್ಕೆ ರೋಗಿ ಕಷ್ಟ ಅನುಭವಿಸಿದ್ದಾರೆ. ಬೆಡ್ ಸಿಗದ ಹಿನ್ನೆಲೆ ಮಹಿಳಾ ರೋಗಿ ಆಟೋದಲ್ಲಿಯೇ ಆಕ್ಸಿಜನ್ ಇಟ್ಟುಕೊಂಡು ಕಷ್ಟ ಅನುಭವಿಸುತ್ತಿರೋ ದೃಶ್ಯಗಳು ಕೊರೊನಾ ಹುಟ್ಟಿಸಿದ ಭಯಾನಕತೆಗೆ ಸಾಕ್ಷಿಯಾಗಿತ್ತು. 55 ವರ್ಷದ ರೋಗಿ ಮಹಿಳೆ ಕಳೆದ ಮೂರು ಗಂಟೆಯಿಂದ ಬೆಡ್ಗಾಗಿ ಅಲೆದಾಡಿದ್ದಾರೆ. ಕೊನೆಗೆ ಬೆಡ್ ಸಿಗದ ಹಿನ್ನೆಲೆ ಆಟೋದಲ್ಲಿಯೇ ಕುಳಿತುಕೊಳ್ಳುವಂತಾಗಿತ್ತು.
Advertisement
ರೋಗಿ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಆಕ್ಸಿಜನ್ ಹಾಕಿಕೊಂಡು ಆಟೋದಲ್ಲಿಯೇ ಕುಳಿತುಕೊಂಡಿದ್ದರು. ಕಲಬುರಗಿ ಜಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಎಲ್ಲಾ ಐಸಿಯು ಬೆಡ್ ಭರ್ತಿಯಾಗಿವೆ. ಆಟೋದಲ್ಲಿ ಕೃತಕ ಆಕ್ಸಿಜನ್ ಸಿಲಿಂಡರ್ ಮೇಲೆ ಉಸಿರಾಡುತ್ತಿರುವ ರೋಗಿ ಸ್ಥಿತಿ ಕರುಣಾಜನಕವಾಗಿತ್ತು.
Advertisement
Advertisement
ಬೆಂಗಳೂರಿನಲ್ಲಿ ಯಾವ ಆಸ್ಪತ್ರೆಯಲ್ಲಯೂ ಬೆಡ್ ಸಿಗದೆ ಒಬ್ಬ ರೋಗಿ ಅಂಬುಲೆನ್ಸ್ನಲ್ಲಿಯೇ ಕಾಯುತ್ತಿದ್ದರು. ಹೀಗೆ ಇಂತದದ್ದೇ ಘಟನೆ ಇಲ್ಲಿ ನಡೆದಿದೆ. ಕೊರೊನಾ ರೋಗಿಗಳು ಇರುವುದರಿಂದ ಬೇರೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುತ್ತಿಲ್ಲ. ಕಲಬುರಗಿಯ ಜಿಲ್ಲಾಡಳಿತ ಈ ಕುರಿತಾಗಿ ಜಾಗೃತಿ ವಹಿಸಬೇಕು, ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Advertisement