ಬೆಂಗಳೂರು: ಸರಿಯಾಗಿ ಬೆಡ್ ಮಾಹಿತಿ ನೀಡದೆ, ಪರಿಶೀಲನೆಗೆ ತೆರಳಿದ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಸಾಕ್ರ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸ್ವತಃ ಜಿಲ್ಲಾಧಿಕಾರಿ ಶಿವಮೂರ್ತಿ ಅವರು ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬೆಡ್ ಸಮಸ್ಯೆ ವಿಚಾರಿಸಲು ಹೋದಾಗ ಅಧಿಕಾರಿಗಳ ಜೊತೆ ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದು, ಬೆಡ್ ಮಾಹಿತಿ ಕೊಡದ್ದಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
Advertisement
ಸರ್ಕಾರದ ನಿಯಮದಂತೆ ಶೇ.50% ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡದೆ ಕಾನೂನು ಉಲ್ಲಂಘಿಸಿರುವ ಮಾರತ್ ಹಳ್ಳಿಯ ಸಾಕ್ರ ಆಸ್ಪತ್ರೆಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಸಲಿಸಲಾಗಿದೆ. ಆಸ್ಪತ್ರೆಯ ಮೂವರು ಮುಖ್ಯಸ್ಥರನ್ನು ಆರೋಪಿಗಳನ್ನಾಗಿ ಹೊಣೆ ಮಾಡಲಾಗಿದೆ. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ನಿಶ್ಚಿತ.
— Dr Sudhakar K (@mla_sudhakar) August 1, 2020
Advertisement
ಕೋವಿಡ್-19 ರೋಗಿಗಳಿಗೆ ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಖಡಕ್ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಸಾಕ್ರ ಆಸ್ಪತ್ರೆ ವಿರುದ್ಧ ಬಿಬಿಎಂಪಿಯಿಂದ ದೂರು ದಾಖಲಿಸಲಾಗಿದೆ. ಅಧಿಕಾರಿಗಳಾದ ಸುನೀಲ್ ಅಗರ್ವಾಲ್ ಹಾಗೂ ಉಮಾಮಹಾದೇವನ್ ತಂಡ ಭೇಟಿ ನೀಡಿದಾಗ ಮಾಹಿತಿ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿಲ್ಲ. ಸಾಕ್ರಾ ಆಸ್ಪತ್ರೆ ಮುಖ್ಯಸ್ಥ ದೀಪಕ್ ಬಲಾನಿ, ದೀಪ್ತಿ, ದೀಪಕ್ ಅಗರೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ವಿಪತ್ತು ನಿರ್ವಾಹಣೆ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸುವಂತೆ ದೂರು ದಾಖಲಿಸಲಾಗಿದೆ.