– ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ಯಾರು?
– ಹೇಗೆ ನಡೆಯುತ್ತದೆ ದಂಧೆ?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿದ್ದ ಬೆಡ್ ದಂಧೆಯನ್ನ ಸಂಸದ ತೇಜಸ್ವಿ ಸೂರ್ಯ ಬಯಲು ಮಾಡಿದ್ದು, ವಾರ್ ರೂಮಿನಲ್ಲಿದ್ದ ದಂಧೆಕೋರರ ಬೆವರಿಳಿಸಿದ್ದಾರೆ. ಕಳೆದ ಐದಾರು ದಿನಗಳಿಂದ ಬೆಡ್ ಹಂಚಿಕೆ ಕುರಿತು ತನಿಖೆ ನಡೆಸಿರುವ ತೇಜಸ್ವಿ ಸೂರ್ಯ, ಬೆಡ್ ಅಭಾವದ ಕಾರಣ ಪತ್ತೆ ಮಾಡಿದ್ದಾರೆ. ಬೆಂಗಳೂರಿನ ಸೌಥ್ ವಾರ್ ರೂಮಿಗೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಬೆಡ್ ದಂಧೆಯ ಮಾಹಿತಿ ಬಿಚ್ಚಿಟ್ಟರು.
Advertisement
ಬೆಂಗಳೂರಿನ ನಿವಾಸಿಗೆ ಪಾಸಿಟಿವ್ ವರದಿ ಬರುತ್ತಿದ್ದಂತೆ, ಆಯಾ ಭಾಗದ ವಾರ್ ಸಿಬ್ಬಂದಿಗೆ ಸೋಂಕಿತನ ಹೆಸರು, ಬಿಯು ನಂಬರ್ ಮತ್ತು ವಿಳಾಸದ ಮಾಹಿತಿ ಹೋಗುತ್ತದೆ. ವಾರ್ ರೂಮಿನಲ್ಲಿ ಕೆಲಸ ಮಾಡೋರು ಸರ್ಕಾರಿ ಅಧಿಕಾರಿಗಳಲ್ಲ. ಹಾಗಾಗಿ ಅಲ್ಲಿದ್ದವರು ಹೊರಗಿನ ತಮ್ಮ ಏಜೆಂಟ್ ಗಳ ಮೂಲಕ ಹಣ ಮಾಡುವ ದಂಧೆಗೆ ಮುಂದಾಗುತ್ತಿದ್ದಾರೆ. ಆದ್ರೆ ಮೇಲ್ವಿಚಾರಣೆ ನಡೆಯದಿರೋದ ಇದಕ್ಕೆ ಕಾರಣ.
Advertisement
Advertisement
ಸೋಂಕಿತನ ಮಾಹಿತಿ ಬರುತ್ತಿದ್ದಂತೆ ಕೆಲವರಿಗೆ ಫೋನ್ ಮಾಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಾರೆ. ಸೋಂಕಿತ ಎ ಸಿಮ್ಟಮ್ಯಾಟಿಕ್ ಅಂತಾ ಗೊತ್ತಾಗುತ್ತಲೇ ಆತನನ್ನು ಹೋಂ ಐಸೋಲೇಷನ್ ಆಗುವಂತೆ ತಿಳಿಸಿ ಆತನ ಹೆಸರಲ್ಲಿ ಬೆಡ್ ಬುಕ್ ಮಾಡುತ್ತಾರೆ. ಕಾಯ್ದಿರಿಸಿದ ಬೆಡ್ ತಮ್ಮ ಏಜೆಂಟ್ ಗಳ ಮೂಲಕ ಸೇಲ್ ಮಾಡಲಾಗುತ್ತೆ. 12 ಗಂಟೆಯೊಳಗೆ ಸೋಂಕಿತ ಆಸ್ಪತ್ರೆಗೆ ದಾಖಲಾಗದಿದ್ರೆ ಅದನ್ನ ವೆಬ್ಸೈಟ್ ನಲ್ಲಿ ಖಾಲಿ ಅಂತ ತೋರಿಸಲಾಗುತ್ತೆ. ಆಗ ಮತ್ತೋರ್ವ ಎ ಸಿಮ್ಟಮ್ಯಾಟಿಕ್ ರೋಗಿಯ ಹೆಸರನ್ನ ಹಾಕಿ ದಂಧೆ ಮಾಡುತ್ತಾರೆ ಎಂದು ತಿಳಿಸಿದರು.
Advertisement
ಕಳೆದೊಂದು ವಾರದಲ್ಲಿ ಎ ಸಿಮ್ಟಮ್ಯಾಟಿಕ್ ವ್ಯಕ್ತಿಗಳ ಹೆಸರಿನಲ್ಲಿ 4,065 ಬೆಡ್ ಗಳನ್ನ ಬ್ಲಾಕ್ ಮಾಡಲಾಗಿದೆ. ಎಷ್ಟೋ ವ್ಯಕ್ತಿಗಳಿಗೆ ತಮ್ಮ ಹೆಸರಿನಲ್ಲಿ ಬೆಡ್ ಬುಕ್ ಆಗಿರೋ ವಿಷಯವೇ ಗೊತ್ತಿಲ್ಲ. ಒಬ್ಬ ಸೋಂಕಿತನ ಹೆಸರಿನಲ್ಲಿ 12 ಬೇರೆ ಬೇರೆ ಆಸ್ಪತ್ರೆಯಲ್ಲಿ ಬೆಡ್ ಬುಕ್ ಮಾಡಲಾಗಿದೆ. ಇದು ಭ್ರಷ್ಟಾಚಾರ ಅಲ್ಲ, ಇದೊಂದು ಕೊಲೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗುತ್ತೆ. ರಾತ್ರೋ ರಾತ್ರಿ ಬೆಡ್ ಬುಕ್ ಮಾಡೋ ದಂಧೆ ನಡೆಯುತ್ತಿದೆ. ಹಾಗಾಗಿ ಈ ಸಂಬಂಧ ಸೂಕ್ತ ತನಿಖೆಯ ಅಗತ್ಯವಿದೆ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.